
ನಂಜನಗೂಡು ಮಠದಲ್ಲಿ ಆರಾಧನೆ ಪ್ರಯುಕ್ತ ಆ.೫ರಿಂದ ಪ್ರವಚನ
ಸಪ್ತಸಾಗರ ವಾರ್ತೆ,ವಿಜಯಪುರ,ಆ. 3: ಶ್ರೀ ಗುರುಸಾರ್ವಭೌಮರ ಆರಾಧನಾ ಮಹೋತ್ಸವದ ಪ್ರಯುಕ್ತ ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ ಆ..೫ ರಿಂದ ೯ ರ ವರೆಗೆ ಶ್ರೀ ಗುರುರಾಯರ ಮಹಿಮೆ ಕುರಿತು ಪ್ರವಚನ ಹಮ್ಮಿಕೊಳ್ಳಲಾಗಿದೆ.ಪಂಡಿತ ಡಾ. ಕೃಷ್ಣಾಚಾರ್ಯ ಕಾಖಂಡಕಿ ಅವರು ಪ್ರತಿದಿನ ಸಂಜೆ ೬ ಗಂಟೆಯಿಂದ ೭ ಗಂಟೆ ವರೆಗೆ ಶ್ರೀಮಠದಲ್ಲಿ ಪ್ರವಚನ ಹೇಳಲಿದ್ದಾರೆ.ಸದ್ಭಕ್ತರು ಪ್ರವಚನದ ಲಾಭ ಪಡೆದುಕೊಳ್ಳುವಂತೆ ಶ್ರೀಮಠದ ವಿಚಾರಣಾಕರ್ತಾ ಗೋಪಾಲ ನಾಯಕ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.