11 ಗಂಟೆಗಳ ಕಾಲ ಮೊಳಗಿದ ಸಂಗೀತ ಸುಧೆ! ವಿಜಯಪುರದ 34 ಕಲಾವಿದರಿಂದ ಶಾಸ್ತ್ರೀಯ ರಾಗಗಳ ರಸದೌತಣ
ಸಪ್ತಸಾಗರ ವಾರ್ತೆ,ವಿಜಯಪುರ, ಆ. 11:ಬೆಳಗಿನ 9ರಿಂದ ರಾತ್ರಿ 11ರವರೆಗೆ ನಿರಂತರವಾಗಿ ಮೊಳಗಿದ ಶಾಸ್ತ್ರೀಯ ರಾಗಗಳು… ಒಂದೆಡೆ ಸಂಗೀತದ ಸೊಬಗು, ಮತ್ತೊಂದೆಡೆ ಕಲಾವಿದರ ಅದ್ಭುತ ಪ್ರಸ್ತುತಿ… ಅಪಾರ ಸಂಖ್ಯೆಯ ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿದ ಅಪೂರ್ವ ಕ್ಷಣಗಳಿಗೆ ವಿಜಯಪುರ ಸಾಕ್ಷಿಯಾಯಿತು.ನಗರದ ವಿಶ್ರಾಮ ಹೋಟೆಲ್ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ಸುರಸಿಂಗಾರ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ, ವಿವೇಕಾನಂದ ಸೇವಾ ಸಂಘ ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸ್ವರಾತ್ಮ ಗುರುಕುಲ, ಗೋಕರ್ಣ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಐದನೇ ಶಾಸ್ತ್ರೀಯ ಸಂಗೀತೋತ್ಸವ ಸಂಗೀತ…


