ನಾಗಠಾಣದಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನ ಆಚರಣೆ
ಸಪ್ತಸಾಗರ ವಾರ್ತೆ, ವಿಜಯಪುರ, ಅ. 11: ಇಂದು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನ. ಈ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ ಹೆಣ್ಣು ಮಕ್ಕಳಾದ ಅನುಶ್ರೀ- ಶ್ರೀನಿಧಿ ಬಂಡೆ, ಸಮೃದ್ಧಿ-ದೀಪಾ,ಭಾಗ್ಯ-ಸನ್ನಿಧಿ ಅವರು ಪರಸ್ಪರ ಸಿಹಿ ಹಂಚಿಕೊಂಡು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಆಚರಿಸಿದರು.ಹೆಣ್ಣು ಎಂದರೆ ಮನೆಯ ಬೆಳಕು. ಹುಟ್ಟಿನಿಂದ ಸಾಯುವ ತನಕ ವಿವಿಧ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುವವಳು. ಜಗದ ಸೃಷ್ಟಿಕರ್ತೆಯೇ ಅವಳಾಗಿರುವಾಗ ಆಕೆ ಇಲ್ಲದೆ ಜೀವಿಸುವುದು ಕಷ್ಟದಾಯಕ. ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದು…


