ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಹೋರಾಟವೂ ಕಾರಣವಾಗಿರಬಹುದು: ಸತೀಶ ಜಾರಕಿಹೊಳಿ
ಸಪ್ತಸಾಗರ ವಾರ್ತೆ,ವಿಜಯಪುರ, ಆ. 30:ಸಚಿವ ನಾಗೇಂದ್ರ ಅವರ ರಾಜೀನಾಮೆ ಹಾಗೂ ರಾಜೀನಾಮೆ ಬಳಿಕವೂ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ಆ ಪಕ್ಷದ ಆಂತರಿಕ ವಿಚಾರವಾಗಿದ್ದು, ಬಿಜೆಪಿ ತನ್ನ ನಿರ್ಧಾರದಂತೆ ಪಾದಯಾತ್ರೆ ನಡೆಸುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ವಿಜಯಪುರ ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ನಡೆಸಿದ ಹೋರಾಟವೇ ಕಾರಣ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿ, “ನಾಗೇಂದ್ರ ರಾಜೀನಾಮೆಗೆ ಬಿಜೆಪಿಯವರೂ ಕಾರಣವಾಗಿರಬಹುದು. ಜೊತೆಗೆ ರಾಜೀನಾಮೆ ನೀಡುವುದು ನಮ್ಮ ಪಕ್ಷದ ನಿರ್ಧಾರವೂ ಆಗಿರುತ್ತದೆ”…


