ರಾಷ್ಟ್ರೀಯ ಶ್ರೇಯಾಂಕಗಳಲ್ಲಿ ಬಿಎಲ್‌ಡಿಇ ವಿವಿಯ ಭರ್ಜರಿ ಸಾಧನೆ
ದಿ ವೀಕ್–ಹನ್ಸಾ ಶ್ರೇಯಾಂಕದಲ್ಲಿ 5ನೇ ಸ್ಥಾನ; ಔಟ್‌ಲುಕ್–ಐಕೇರ್‌ನಲ್ಲಿ 10ನೇ ಸ್ಥಾನ • ಹಸಿರು ವಿಶ್ವವಿದ್ಯಾಲಯ ಶ್ರೇಯಾಂಕದಲ್ಲಿ 7ನೇ ಸ್ಥಾನ ಸಪ್ತಸಾಗರ ವಾರ್ತೆ,ವಿಜಯಪುರ, ಆ.10:ಪ್ರಸಕ್ತ ಸಾಲಿನ ವಿವಿಧ ರಾಷ್ಟ್ರೀಯ ಶ್ರೇಯಾಂಕಗಳಲ್ಲಿ ಗಮನಾರ್ಹ ಸಾಧನೆ ದಾಖಲಿಸುವ ಮೂಲಕ ಬಿಎಲ್‌ಡಿಇ (ಡೀಮ್ಡ್ ವಿಶ್ವವಿದ್ಯಾಲಯ) ದೇಶದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.ಶೈಕ್ಷಣಿಕ ಗುಣಮಟ್ಟ, ಬೋಧನೆ ಮತ್ತು ಕಲಿಕೆ, ಸಂಶೋಧನೆ ಹಾಗೂ ನಾವೀನ್ಯತೆ, ಆರೋಗ್ಯ ಸೇವೆ, ಕ್ಲಿನಿಕಲ್ ತರಬೇತಿ, ಆಧುನಿಕ ಮೂಲಸೌಕರ್ಯ ಮತ್ತು ವಿದ್ಯಾರ್ಥಿ-ಕೇಂದ್ರಿತ ಶಿಕ್ಷಣಕ್ಕೆ ನೀಡುತ್ತಿರುವ…


