ನವಜಾತ ಶಿಶು ಪುನರುಜ್ಜೀವನ ತರಬೇತಿ ಅತ್ಯಂತ ಅಗತ್ಯ: ಡಾ. ಇನಾಮದಾರ
ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 11:ನವಜಾತ ಶಿಶುಗಳ ಜೀವಿತಾವಧಿ ಹೆಚ್ಚಿಸಲು ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸಲು ಸಂರಚಿತ ನವಜಾತ ಶಿಶು ಪುನರುಜ್ಜೀವನ ತರಬೇತಿ ಅತ್ಯಂತ ಅಗತ್ಯವಾಗಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಡಾ.ಅರುಣ ಚಂ. ಇಮಾಮದಾರ ಹೇಳಿದ್ದಾರೆ.ರವಿವಾರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರವ್ಯಾಪಿ ನವಜಾತ ಶಿಶು ಪುನರುಜ್ಜೀವನ ತರಬೇತಿ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಶಾಸ್ತ್ರ ವಿಭಾಗದ ಸೇವಾ ಮನೋಭಾವ ಮತ್ತು ಶೈಕ್ಷಣಿಕ ಕಾರ್ಯಚಟುವಟಿಕೆಗಳು ಈ ನಿಟ್ಟಿನಲ್ಲಿ ಪ್ರಮುಖವಾಗಿವೆ ಎಂದು ಅವರು…


