
ಸಮರ್ಪಣಾ ಭಾವನೆಯಿಂದ ಸೇವೆ ಸಲ್ಲಿಸಿ: ಪ್ರೊ. ಸಿ. ಎಸ್. ಪಾಟೀಲ
ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 8: ವಿದ್ಯಾರ್ಥಿಗಳು ಕಾನೂನು ಶಿಕ್ಷಣವನ್ನು ಶ್ರದ್ದೆಯಿಂದ ಅಧ್ಯಯನ ಮಾಡಿ ಸಮರ್ಪಣೆ ಮನೋಭಾವದಿಂದ ಸೇವೆ ಮಾಡುವ ಮೂಲಕ ನ್ಯಾಯ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯಬೇಕು ಎಂದು ಬೆಂಗಳೂರಿನ ಕರ್ನಾಟಕ ಸಂಸದೀಯ ಸುಧಾರಣೆ ಸಂಸ್ಥೆ(ಕೆ.ಐ.ಎಲ್.ಪಿ.ಏ.ಆರ್) ನಿರ್ದೇಶಕ ಪ್ರೊ. ಸಿ. ಎಸ್. ಪಾಟೀಲ ಹೇಳಿದ್ದಾರೆ.ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಬುಧವಾರ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಡೀಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಮಾತನಾಡಿ, ಕಾನೂನು ವಿದ್ಯಾರ್ಥಿಗಳು…