ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ತಾಣ ಆಲಮಟ್ಟಿಯಲ್ಲಿದೋಣಿ ವಿಹಾರಕ್ಕೆ ಸಚಿವ ಶಿವಾನಂದ ಪಾಟೀಲ ಚಾಲನೆ

ಸಪ್ತಸಾಗರ ವಾರ್ತೆ, ವಿಜಯಪುರ, ಜ.24: ರಾಜ್ಯದ ಕೆಆರ್‍ಎಸ್ ನಂತರದ ಉತ್ತರ ಕರ್ನಾಟಕದ ಪ್ರಮುಖ ಪ್ರೇಕ್ಷಣೀಯ ಪ್ರವಾಸಿ ತಾಣವಾದ ಆಲಮಟ್ಟಿ ಸಿಲ್ವರ ಲೇಕ್‍ನಲ್ಲಿ ಆರಂಭಿಸಲಾದ ದೋಣಿ ವಿಹಾರಕ್ಕೆ ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಶನಿವಾರ ಚಾಲನೆ ನೀಡಿದರು.ಜಲಸಂಪನ್ಮೂಲ ಇಲಾಖೆ, ಕೃಷ್ಣಾ ಭಾಗ್ಯ ಜಲನಿಗಮದ ವತಿಯಿಂದ ಆಲಮಟ್ಟಿ ರಾಕ್ ಉದ್ಯಾನವನದಲ್ಲಿರುವ ಸಿಲ್ವರ್ ಲೇಕ್‍ನಲ್ಲಿ ಆರಂಭಿಸಲಾದ ದೋಣಿ ವಿಹಾರಕ್ಕೆ ಚಾಲನೆ ನೀಡಿದ ಅವರು, ಆಲಮಟ್ಟಿ ಪ್ರವಾಸ ತಾಣ ಬಹಳಷ್ಟು ಪ್ರವಾಸಿಗರಿಗೆ ಪ್ರೇಕ್ಷಣಿಯ…

Read More

ಉತ್ತರ ಕರ್ನಾಟಕ ರೈಲ್ವೆ ಸಂಪರ್ಕ ಹಾಗೂ ಅಭಿವೃದ್ಧಿ ಕುರಿತು ಕೇಂದ್ರ ರೇಲ್ವೆ ಸಚಿವರ ಜೊತೆಗೆ ಚರ್ಚೆ

ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 15:ಉತ್ತರ ಕರ್ನಾಟಕ ಭಾಗದ ರೈಲ್ವೆ ಸಂಪರ್ಕ ಹಾಗೂ ಅಭಿವೃದ್ಧಿ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಜೊತೆಗೆ ರಾಜ್ಯದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದರಾದ ರಮೇಶ ಜಿಗಜಿಣಗಿ ಹಾಗೂ ಪಿ.ಸಿ. ಗದ್ದಿಗೌಡರ ಅವರು ಸೋಮವಾರ ಸಂಸತ್ ಭವನದಲ್ಲಿ ಭೇಟಿಯಾಗಿ ಚರ್ಚಿಸಿದರು.ಉತ್ತರ ಕರ್ನಾಟಕ ಭಾಗದಲ್ಲಿ ರೈಲ್ವೆ ಸಂಪರ್ಕ ಹಾಗೂ ಅಭಿವೃದ್ಧಿಯ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಈ ಕುರಿತು…

Read More

ಬೆಳಗಾವಿ ಚಳಿಗಾಲ ಅಧಿವೇಶನ:ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ವಿಷಯ ಚರ್ಚೆಗೆ ಅವಕಾಶ ಕೋರಿ ಶಾಸಕ ಯತ್ನಾಳ ಪತ್ರ

ಸಪ್ತಸಾಗರ ವಾರ್ತೆ, ವಿಜಯಪುರ, ನ. 17: ಬರುವ ಡಿಸೆಂಬರ್ 8 ರಿಂದ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ ವಿಷಯ ಕುರಿತು ಚರ್ಚೆಗೆ ಅಧಿವೇಶನದ ಮೊದಲ ಅವಧಿಯಲ್ಲೇ ಹೆಚ್ಚಿನ ಸಮಯಾವಕಾಶ ಕಲ್ಪಿಸುವಂತೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ.ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗಗಳ ಅಭಿವೃದ್ಧಿ ಹಾಗೂ ಸ್ಥಾನಮಾನಗಳ ಹಂಚಿಕೆಯಲ್ಲಿ ಪ್ರಾದೇಶಿಕ ತಾರತಮ್ಯವನ್ನು ನಿವಾರಿಸುವುದು ಅತೀ ಅವಶ್ಯವಿದೆ. ಆದರೆ, ಪ್ರತಿ ಬಾರಿ…

Read More

ಗಣಪ ಹೋದ, ಜೋಕುಮಾರ ಬಂದ…

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 3: ‘ಅಡ್ಡಡ್ಡ ಮಳಿ ಬಂದು..ದೊಡ್ಡದೊಡ್ಡ ಕೆರೆ ತುಂಬಿ..‌ಗೊಡ್ಡುಗಳೆಲ್ಲ ಹೈನಾಗಿ..ಜೋಕುಮಾರ ಮಳಿ ತಂದ’..ಎಂಬ ಜೋಕುಮಾರನ ಬಗ್ಗೆ ಮಹಿಳೆಯರು ಪದಗಳ ಮೂಲಕ ಹಾಡುತ್ತಾ, ಉತ್ತರ ಕರ್ನಾಟಕದಲ್ಲಿ ಗಣಪತಿ ಹೋದ ಮಾರನೇ ದಿನ ಜನ್ಮ ತಾಳುವ ಜೋಕುಮಾರ ರೈತರ ಪಾಲಿಗೆ ವರವಾಗಿ ಪರಿಣಮಿಸಿದ್ದಾನೆ. ತಾಲೂಕಿನ ನಾಗಠಾಣ ಗ್ರಾಮದಲ್ಲಿ ಬಹಳ ವರ್ಷಗಳಿಂದ ಈ ಜೋಕುಮಾರನ ಹಬ್ಬ ಚಾಲ್ತಿಯಲ್ಲಿದೆ.ಮಳೆಗಾಗಿ ಜೋಕುಮಾರನನ್ನು ನೆನೆದು ಪ್ರಾರ್ಥಿಸುವ ಮಹಿಳೆಯರು ಜೋಕುಮಾರ ಮೂರ್ತಿಯನ್ನು ಏಳು ದಿನಗಳ ಕಾಲ ಗ್ರಾಮದಲ್ಲಿನ ಮನೆ ಮನೆಗೆ ಹೊತ್ತು ಸಂಚರಿಸುತ್ತಾರೆ….

Read More

ಏರೋಸ್ಪೇಸ್ ಪಾರ್ಕ್ ಉತ್ತರ ಕರ್ನಾಟಕದಲ್ಲಿ ಸ್ಥಾಪಿಸಿ: ಶಂಕರಗೌಡ ಬಿರಾದಾರ ಆಗ್ರಹ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 21 :ರಾಜ್ಯ ಸರ್ಕಾರ ದೇವನಹಳ್ಳಿ ಬಳಿ ಭೂಸ್ವಾಧೀನ ರದ್ದುಪಡಿಸಿದ ಹಿನ್ನಲೆಯಲ್ಲಿ ಉದ್ದೇಶಿತ ಏರೊಸ್ಪೇಸ್ ಪಾರ್ಕ್ ಅನ್ನು ಉತ್ತರ ಕರ್ನಾಟಕ ಭಾಗದಲ್ಲಿ ಸ್ಥಾಪಿಸಬೇಕೆಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಸರ್ಕಾರವನ್ನು ಆಗ್ರಹಿಸಿದ್ದಾರೆಏರೊಸ್ಪೇಸ್ ಪಾರ್ಕ್ ಅನ್ನು ಉತ್ತರ ಕರ್ನಾಟಕದ ಯಾವುದಾದರೂ ಜಿಲ್ಲೆಯಲ್ಲಿ ಸ್ಥಾಪನೆ ಮಾಡಿದರೆ ಪ್ರಾದೇಶಿಕ ಅಸಮತೋಲನ ಕಡಿಮೆಯಾಗಲಿದೆ. ವೈಮಾನಿಕ ಸಂಶೋಧನೆ ಉತ್ಪಾದನೆ ರಿಪೇರಿ ರಕ್ಷಣೆ ವಿಭಾಗ ವಿಶೇಷವಾಗಿ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳ ಬಾಗಿಲನ್ನೇ ತೆರೆವುಯುವ ಏರೊಸ್ಪೇಸ್ ಪಾರ್ಕನ್ನು ಯಾವುದೇ…

Read More