ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ಸದಸ್ಯರಾಗಿ ಸಾಹಿತಿ ಮುರುಗೇಶ ಸಂಗಮ ನೇಮಕ
ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 8 :ರಾಜ್ಯ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರˌ ಬೆಂಗಳೂರುˌ ಪುಸ್ತಕ ಸಂಸ್ಕೃತಿಯನ್ನು ಉಳಿಸಿˌ ಬೆಳೆಸುವ ನಿಟ್ಟಿನಲ್ಲಿ ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ರಚನೆ ಮಾಡಿದ್ದು ˌ ನಗರದ ಸಾಹಿತಿˌ ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥಾಲಯ ಸಹಾಯಕ ಮುರುಗೇಶ ಸಂಗಮ ಅವರನ್ನು ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದಅಧ್ಯಕ್ಷ ಡಾ. ಮಾನಸ ಅವರು ತಿಳಿಸಿದ್ದಾರೆ.ಈ ಯೋಜನೆಯು ಓದುವ ಸಂಸ್ಕೃತಿಯನ್ನು ಉಳಿಸಲು ಲೇಖಕರು ಮತ್ತು ಪ್ರಕಾಶಕರಿಗೆ ಬೆಂಬಲ ನೀಡಲು ಹಾಗೂ…


