ವಿಶ್ವ ಪರಂಪರೆ ಪಟ್ಟಿಗೆ ಯಾವಾಗ ಸೇರುತ್ತದೆ ವಿಜಯಪುರದ ಹೆಮ್ಮೆಯ ಗೋಳಗುಮ್ಮಟ?
ಇಚ್ಛಾಶಕ್ತಿ ಕೊರತೆಯಿಂದ ನೆನೆಗುದಿಗೆ ಬಿದ್ದ ವಿಶ್ವಮಾನ್ಯತೆಯ ಕನಸು ಚೇತನ ಆಸಂಗಿಸಪ್ತಸಾಗರ ವಾರ್ತೆ,ವಿಜಯಪುರ, ಜು. 5: ಆದಿಲ್‌ಶಾಹಿ ವಾಸ್ತುಶಿಲ್ಪದ ಶ್ರೇಷ್ಠ ಮಾದರಿ, ವಿಶ್ವದ ಅತಿದೊಡ್ಡ ಗುಮ್ಮಟಗಳಲ್ಲಿ ಒಂದಾದ ಗೋಳಗುಮ್ಮಟ ಇಂದು ದೇಶ-ವಿದೇಶದ ಪ್ರವಾಸಿಗರನ್ನು ಸೆಳೆಯುತ್ತಿರುವ ಐತಿಹಾಸಿಕ ಸ್ಮಾರಕ. ಆದರೆ, ಹಲವು ದಶಕಗಳಿಂದ ಕೇಳಿಬರುತ್ತಿರುವ ಯುನೆಸ್ಕೋ (UNESCO) ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವ ಕನಸು ಮಾತ್ರ ಇನ್ನೂ ನನಸಾಗಿಲ್ಲ. ಅಧಿಕಾರಿಗಳ ನಿರಾಸಕ್ತಿ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಸಮನ್ವಯದ ಅಭಾವದಿಂದ ಈ ಮಹತ್ವಾಕಾಂಕ್ಷೆಯ ಯೋಜನೆ ವರ್ಷದಿಂದ ವರ್ಷಕ್ಕೆ ಮುಂದೂಡಲ್ಪಡುತ್ತಲೇ ಬಂದಿದೆ.ಗೋಳಗುಮ್ಮಟ…


