
ಸಾವಯವ ತ್ಯಾಜ್ಯ ಕೊಳೆಯುವ ಉಪಕರಣ: ಭಾರತ ಸರ್ಕಾರದ ಪೇಟೆಂಟ್ ಮಂಜೂರು
ಸಪ್ತಸಾಗರ ವಾರ್ತೆ, ವಿಜಯಪುರ, ಆ. 10: ನಗರದ ಬಿಎಲ್ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ “ಸಾವಯವ ತ್ಯಾಜ್ಯವನ್ನು ಕೊಳೆಯುವ ಉಪಕರಣ” ಎಂಬ ಶೀರ್ಷಿಕೆಯ ವಿನ್ಯಾಸಕ್ಕಾಗಿ ಭಾರತ ಸರ್ಕಾರದ ಪೇಟೆಂಟ್ ಕಚೇರಿಯು ಪೇಟೆಂಟ್ ನೀಡಿದೆ.2025ರ ಜು. 30ರಂದು ಸಂಖ್ಯೆ 454549-001 ಹೊಂದಿರುವ ವಿನ್ಯಾಸದ ನೋಂದಣಿ ಪ್ರಮಾಣಪತ್ರದ ಅಡಿಯಲ್ಲಿ ಪೇಟೆಂಟ್ ನೋಂದಾಯಿಸಲಾಗಿದೆ. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಾದ ಉತ್ಪನ್ನವನ್ನು ವಿನ್ಯಾಸಗೊಳಿಸುವಲ್ಲಿ ಪ್ರೊ. ಸಂದೀಪ ಶಂಕರ…