ಪೊಲೀಸರ ಗುಂಡೇಟಿಗೆ ರೌಡಿಶೀಟರ್ ಬಲಿ
ಸಪ್ತಸಾಗರ ವಾರ್ತೆ, ವಿಜಯಪುರ, ಅ. 18:ಪರಾರಿಯಾಗಲು ಯತ್ನಿಸಿದ ರೌಡಿಶೀಟರ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ರೌಡಿಶೀಟರ್ ತೀವ್ರವಾಗಿ ಗಾಯಗೊಂಡು ಮೃತಪಟ್ಟ ಘಟನೆಜಿಲ್ಲೆಯ ಸಿಂದಗಿ ತಾಲೂಕಿನ ರಾಂಪೂರ ಬಳಿ ಶನಿವಾರ ಬೆಳಗ್ಗೆ ನಡೆದಿದೆ.ಯುನಸ್ ಇಕ್ಲಾಸ್ ಪಟೇಲ್ (35) ಮೃತಪಟ್ಟ ರೌಡಿಶೀಟರ್.ನಿನ್ನೆ ಓರ್ವನಿಗೆ ಚಾಕೂ ತೋರಿಸಿ 25 ಸಾವಿರ ಹಣ ಯುನಸ್ ದರೋಡೆ ಮಾಡಿದ್ದ.ನಂತರ ಆತನು ಸ್ಕೂಟಿ ಸಹ ದರೋಡೆ ಮಾಡಿ ಪರಾರಿಯಾಗಿದ್ದ.ಈ ಕುರಿತು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಯುನಸ್ ಆತನ ಸ್ವಗ್ರಾಮ ಆಲಮೇಲ…


