ಗ್ಯಾಸ್ ಕಟರ್ನಿಂದ ಎಟಿಎಂ ಒಡೆದು ₹19.29 ಲಕ್ಷ ಕಳವು
ಮಧ್ಯಪ್ರದೇಶದಲ್ಲಿ ಮೂವರು ಆರೋಪಿಗಳ ಬಂಧನ; ₹3.60 ಲಕ್ಷ ನಗದು, ಸ್ಕಾರ್ಪಿಯೋ ಹಾಗೂ ಗ್ಯಾಸ್ ಕಟರ್ ವಶ ಸಪ್ತಸಾಗರ ವಾರ್ತೆ,ವಿಜಯಪುರ, ಸೆ.11:ಜಿಲ್ಲೆಯ ಕೂಡಗಿ ಪೊಲೀಸ್ ಠಾಣೆ ವ್ಯಾಪ್ತಿಯ ಗೊಳಸಂಗಿ ಗ್ರಾಮದ ಸಮೀಪ ಕೆನರಾ ಬ್ಯಾಂಕ್ ಎಟಿಎಂಗೆ ಗ್ಯಾಸ್ ಕಟರ್ ಬಳಸಿ ನುಗ್ಗಿ ₹19.29 ಲಕ್ಷ ಕಳವು ಮಾಡಿದ್ದ ಪ್ರಕರಣವನ್ನು ವಿಜಯಪುರ ಪೊಲೀಸರು ಭೇದಿಸಿದ್ದು, ಹರಿಯಾಣ ಮತ್ತು ಉತ್ತರ ಪ್ರದೇಶ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ…


