ಬಡಮಕ್ಕಳ ಅಕ್ಷರ ದಾಹ ನೀಗಿಸಿದ ಬಂಥನಾಳದ ಸಂಗನಬಸವ ಶಿವಯೋಗಿಗಳು-ಸಂತೋಷ ಬಂಡೆ
ಸಪ್ತಸಾಗರ ವಾರ್ತೆ, ವಿಜಯಪುರ, ಜು. 27:ಶೈಕ್ಷಣಿಕ ಕ್ರಾಂತಿಯ ಹರಿಕಾರ, ಅಕ್ಷರ ದಾಸೋಹಿ ಬಂಥನಾಳದ ಲಿಂ.ಸಂಗನಬಸವ ಶ್ರೀಗಳು ಎರಡನೇ ಬಸವಣ್ಣನಂತಿದ್ದರು. ದೇಹದ ಆರೋಗ್ಯಕ್ಕಿಂತ ಸಮಾಜದ ಆರೋಗ್ಯವೇ ಮುಖ್ಯ ಎಂದರಿತ ಶ್ರೀಗಳ ಜೀವನವೇ ನಮ್ಮ ಬದುಕಿಗೆ ದಾರಿದೀಪ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ರವಿವಾರ ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ‘ಸಂತ ಸಂಗನಬಸವ ಶಿವಯೋಗಿಗಳ 125 ನೇ ಜಯಂತ್ಯೋತ್ಸವ’ಕ್ಕೆ ಚಾಲನೆ ನೀಡಿ ಮಾತನಾಡಿದರು.ವಿದ್ಯಾರ್ಥಿಗಳೇ ದೇವರು, ವಿದ್ಯಾಲಯವೇ ದೇವಾಲಯ ಎಂಬ ಮಂತ್ರದೊಂದಿಗೆ ಭಕ್ತರು ಕೊಟ್ಟ ಕಾಣಿಕೆಯಲ್ಲೇ ಬಡ…


