ಪುನೀತ ರಾಜಕುಮಾರ ಸಾಧನೆ, ಸೇವೆ ಯುವಪೀಳಿಗೆಗೆ ಪ್ರೇರಣೆ-ಸಂತೋಷ ಬಂಡೆ
ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 17:ಪುನೀತ ರಾಜಕುಮಾರ ಅವರ ಸಾಧನೆ, ಸೇವೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಮಂಗಳವಾರ ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಪುನೀತ ರಾಜಕುಮಾರ ಅವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡ ‘ಸ್ಫೂರ್ತಿ ದಿನ’ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪುನೀತ ರಾಜಕುಮಾರ ತಮ್ಮ ವಿನಯಶೀಲ ನಡವಳಿಕೆ ಮತ್ತು ನಟನೆಯಿಂದ ಕನ್ನಡಿಗರ ಮನೆಮಾತಾಗಿದ್ದರು. ತಮ್ಮಸಮಾಜ ಸೇವೆ, ಮಾನವೀಯ ಗುಣಗಳಿಂದ ಜನಮನ ಗೆದ್ದು, ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ತಮ್ಮ ಜೀವನದಲ್ಲಿ ಮಾಡಿದ…


