ರಂಭಾಪುರದಲ್ಲಿ ಜೋಡು ಕುದುರೆ ಓಟದ ಸ್ಪರ್ಧೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 13: ತಾಲೂಕಿನ ರಂಭಾಪುರ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಉತ್ಸವದ ಪೂರ್ವಭಾವಿಯಾಗಿ ರೈತರಿಗಾಗಿ ಜೋಡು ಕುದುರೆ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು.ಸ್ಪರ್ಧೆಯಲ್ಲಿ ವಿಜೇತರಾದ ರೈತರಿಗೆ ಊರಿನ ಹಿರಿಯರು, ಯುವಕರು ಬಹುಮಾನಗಳನ್ನು ವಿತರಿಸಿದರು.ಸಂಗನಗೌಡ ಪಾಟೀಲ, ಈರನಗೌಡ ಪಾಟೀಲ, ಧರೆಪ್ಪ ಪೂಜಾರಿ, ಶರಣು ಪೂಜಾರಿ, ಶ್ರೀಶೈಲ ಲೋಗಾವಿ, ಕೆಂಚಪ್ಪ ಲೋಗಾವಿ, ಸಂತೋಷ ಮೆಂಡೆಗಾರ, ರಾಮನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Read More

ಎತ್ತಿನಬಂಡಿ ಓಟ ಕ್ರೀಡೆ ಆಯೋಜನೆ : ಅರ್ಜಿ ಆಹ್ವಾನ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 31:ಜಿಲ್ಲೆಯಲ್ಲಿ ಎತ್ತಿನಬಂಡಿ ಓಟ ಕ್ರೀಡೆಯನ್ನು ಆಯೋಜಿಸಲಾಗುತ್ತಿದ್ದು, ಎತ್ತಿನಬಂಡಿ ಓಟ ಕ್ರೀಡೆಯಲ್ಲಿ ಆಸಕ್ತ ಹೊಂದಿರುವ ಸಂಘ-ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಎತ್ತಿನಬಂಡೆ ಕ್ರೀಡೆಗೆ ಪ್ರೋತ್ಸಾಹ ಮತ್ತು ಉತ್ತೇಜನ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುತ್ತಾರೆ. ಎತ್ತಿನ ಬಂಡೆ ಕ್ರೀಡೆಗೆ ಪ್ರೋತ್ಸಾಹ ಹಾಗೂ ಉತ್ತೇಜನ ನೀಡಲು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸುವ 15 ಸಂಘ-ಸಂಸ್ಥೆಗಳಿಗೆ ತಲಾ 2 ಲಕ್ಷ ರೂ.ಗಳನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಆಯ್ಕೆ ಮಾಡುವ ಸಂಘ-ಸಂಸ್ಥೆಗಳಿಗೆ ಅನುದಾನ ಒದಗಿಸಲಾಗುತ್ತದೆ.ಜಿಲ್ಲೆಯಲ್ಲಿಯೂ ಸಹ ಜಿಲ್ಲಾಧಿಕಾರಿಗಳ…

Read More