
ಗಣಪ ಹೋದ, ಜೋಕುಮಾರ ಬಂದ…
ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 3: ‘ಅಡ್ಡಡ್ಡ ಮಳಿ ಬಂದು..ದೊಡ್ಡದೊಡ್ಡ ಕೆರೆ ತುಂಬಿ..ಗೊಡ್ಡುಗಳೆಲ್ಲ ಹೈನಾಗಿ..ಜೋಕುಮಾರ ಮಳಿ ತಂದ’..ಎಂಬ ಜೋಕುಮಾರನ ಬಗ್ಗೆ ಮಹಿಳೆಯರು ಪದಗಳ ಮೂಲಕ ಹಾಡುತ್ತಾ, ಉತ್ತರ ಕರ್ನಾಟಕದಲ್ಲಿ ಗಣಪತಿ ಹೋದ ಮಾರನೇ ದಿನ ಜನ್ಮ ತಾಳುವ ಜೋಕುಮಾರ ರೈತರ ಪಾಲಿಗೆ ವರವಾಗಿ ಪರಿಣಮಿಸಿದ್ದಾನೆ. ತಾಲೂಕಿನ ನಾಗಠಾಣ ಗ್ರಾಮದಲ್ಲಿ ಬಹಳ ವರ್ಷಗಳಿಂದ ಈ ಜೋಕುಮಾರನ ಹಬ್ಬ ಚಾಲ್ತಿಯಲ್ಲಿದೆ.ಮಳೆಗಾಗಿ ಜೋಕುಮಾರನನ್ನು ನೆನೆದು ಪ್ರಾರ್ಥಿಸುವ ಮಹಿಳೆಯರು ಜೋಕುಮಾರ ಮೂರ್ತಿಯನ್ನು ಏಳು ದಿನಗಳ ಕಾಲ ಗ್ರಾಮದಲ್ಲಿನ ಮನೆ ಮನೆಗೆ ಹೊತ್ತು ಸಂಚರಿಸುತ್ತಾರೆ….