ರಂಗಕರ್ಮಿ ತಾಳಿಕೋಟೆ ನಿಧನಕ್ಕೆ ಸಚಿವ ಶಿವಾನಂದ ಪಾಟೀಲ ಕಂಬನಿ
ಸಪ್ತಸಾಗರ ವಾರ್ತೆ, ಸಿಂದಗಿ, ಅ. 14: ರಂಗದ ಮೇಲೆ ಹಾಸ್ಯದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿ ಜನಮನ್ನಣೆ ಗಳಿಸಿದ್ದ ರಾಜು ತಾಳಿಕೋಟಿ ಎಂಬ ಅದ್ಭುತ ಕಲಾವಿದ ನಗುತ್ತಲೇ ಜೀವನ ರಂಗಕ್ಕೆ ವಿದಾಯ ಹೇಳಿದ್ದಾರೆ. ರಂಗಭೂಮಿ ಇಂಥ ಅದ್ಭುತ ಪ್ರತಿಭೆಯನ್ನು ಕಳೆದುಕೊಂಡು ಬಡವಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ವಿಷಾದಿಸಿದರು.ನಿಧನರಾಗಿರುವ ರಂಗಕರ್ಮಿ, ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದ ರಾಜು ತಾಳಿಕೋಟಿ ಅವರ ಅಂತಿಮ ದರ್ಶನ ಪಡೆದು ಸಿಂದಗಿ ಕನ್ನಡ ಸಾಹಿತ್ಯ…


