ಪಡಿತರ ಚೀಟಿದಾರರಿಗೆ ಜೂನ್ 25 ರವರೆಗೆ ಐರಿಸ್ ಮೂಲಕ ಇ-ಕೆವೈಸಿ ಮಾಡಿಸಲು ವಿಶೇಷ ಅವಕಾಶ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ.12:ನಗರ ಪ್ರದೇಶದಲ್ಲಿ ತಾಂತ್ರಿಕ ಕಾರಣಗಳಿಂದ ಇ-ಕೆವೈಸಿ ಮಾಡಿಸಲು ಬಾಕಿ ಇರುವ ಪಡಿತರ ಚೀಟಿದಾರರಿಗೆ ಐರಿಸ್ ಸಾಧನದ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳಲು ಆಹಾರ ಇಲಾಖೆಯು ಜೂನ್ 25 ರವರೆಗೆ ವಿಶೇಷ ಅವಕಾಶ ಕಲ್ಪಿಸಿದೆ.ವಿಜಯಪುರ ನಗರ ಪ್ರದೇಶದಲ್ಲಿ ಇನ್ನೂ ಸುಮಾರು 697 ಪಡಿತರ ಚೀಟಿದಾರರ ಇ-ಕೆವೈಸಿ ಬಾಕಿ ಇರುವುದು ಕಂಡು ಬಂದಿದೆ. ಬಯೋಮೆಟ್ರಿಕ್ (ಬೆರಳು ಗುರುತು) ಸರಿಯಾಗಿ ಮೂಡದ ಕಾರಣ ಇ-ಕೆವೈಸಿ ಪ್ರಕ್ರಿಯೆ ನೂರಕ್ಕೆ ನೂರರಷ್ಟು ಪೂರ್ಣಗೊಂಡಿಲ್ಲದೇ ಇರುವುದರಿಂದ ಇಲಾಖೆಯ ವತಿಯಿಂದಲೇ ವಿಶೇಷ ಇ-ಕೆವೈಸಿ ಮಾಡಿಸಲು ಅವಕಾಶ…

Read More