ನಿವೃತ್ತ ಯೋಧನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 16:ನಿವೃತ್ತ ಯೋಧನ ಮೇಲೆ ಮಾರಕಾಸ್ತ್ರಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆಜಿಲ್ಲೆಯ ಇಂಡಿ ನಗರದ ಕೆಇಬಿ ಎದುರಿಗಿನ ಮಸೂತಿ ಹತ್ತಿರ ನಡೆದಿದೆ.ಇಂಡಿ ತಾಲೂಕಿನ ಹಿರೇ ಮಸಳಿ ಗ್ರಾಮದ ನಿವೃತ್ತ ಯೋಧ ಮಾರುತಿ ಕ್ಷತ್ರಿ (45)ಎಂಬ ವ್ಯಕ್ತಿಯ ಮೇಲೆ ಭೀಕರ ಹಲ್ಲೆ ನಡೆದಿದೆ.ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಮೂವರು ಮುಸುಕುಧಾರಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದು ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ದೌಡಾಯಿಸಿ ಪರಿಶೀಲಿಸಿದ್ದಾರೆ.ಇಂಡಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


