‘ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನ ಕಾನೂನು’ ಜಾರಿಗೆ ವೈಜ್ಞಾನಿಕ ಚಿಂತನೆಗೆ ಕರೆ
ಸಪ್ತಸಾಗರ ವಾರ್ತೆ,ಬಸವನಬಾಗೇವಾಡಿ, ಆ. 18: ಬಯಲುಸೀಮೆಯ ಜನರ ಬದುಕು ಹಾಗೂ ಮಣ್ಣಿನ ಆರೋಗ್ಯ ನಂದಿ ಕೃಷಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದು, ನಂದಿ ಕೃಷಿ ಸಂಸ್ಕೃತಿಯ ಪುನಶ್ಚೇತನಕ್ಕಾಗಿ ‘ಶ್ರೀ ಸಿದ್ಧೇಶ್ವರ ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನ ಕಾನೂನು’ ಜಾರಿಗೆ ತರಲು ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ನಿವೃತ್ತ ಸಹಾಯಕ ನಿರ್ದೇಶಕ ಎಸ್.ಜಿ. ನಾಡಗೌಡ ಹೇಳಿದರು.ತಾಲೂಕಿನ ನಂದಿಹಾಳ ಪಿ.ಯು. ಗ್ರಾಮದ ಶ್ರೀ ಕೊಡೇಕಲ್ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ನಂದಿ ಭಕ್ತರ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ…


