ಚಡಚಣ ಎಸ್ ಬಿ ಐ ಬ್ಯಾಂಕ್ ದರೋಡೆ ಪ್ರಕರಣ: ಪತ್ತೆಯಾದ ಬ್ಯಾಗ್ ನಲ್ಲಿ 6.55 ಕೆಜಿ ಚಿನ್ನಾಭರಣ, 41.4 ಲಕ್ಷ ನಗದು ವಶಕ್ಕೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 19:ಚಡಚಣ ಎಸ್‌ಬಿ‌ಐ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆಕೋರರು ಮಹಾರಾಷ್ಟ್ರದ ಹುಲಿಜಂತಿ ಗ್ರಾಮದಲ್ಲಿ ಪತ್ತೆಯಾಗಿದ್ದು, ಬಚ್ಚಿಟ್ಟಿದ್ದ ಬ್ಯಾಗ್ ನಲ್ಲಿ 6.55 ಕೆಜಿ ಚಿನ್ನಾಭರಣ ಹಾಗೂ 41.4 ಲಕ್ಷ ರೂಪಾಯಿ ದೊರೆತಿದೆ.ದರೋಡೆಕೋರರು ಚಿನ್ನಾಭರಣ, ನಗದು ಇರುವ ಬ್ಯಾಗ್ ವೊಂದನ್ನು ಹುಲಿಜಂತಿ ಗ್ರಾಮದ ಹಾಳು ಬಿದ್ದ ಮನೆ ಮೇಲ್ಛಾವಣಿ ಮೇಲೆ ಬಿಟ್ಟು ಹೋಗಿರುವುದು ಪೊಲೀಸರ ಕೈಗೆ ಸಿಕ್ಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಓರ್ವ ದರೋಡೆಕೋರ ಹಾಳು ಬಿದ್ದಮನೆಯ ಮೇಲ್ಚಾವಣಿ…

Read More

ಬ್ಯಾಂಕ್ ದರೋಡೆ: ಶೀಘ್ರದಲ್ಲಿ ಆರೋಪಿಗಳ ಬಂಧನ- ಎಸ್ಪಿ ನಿಂಬರಗಿ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 17:ಚಡಚಣ ಎಸ್ ಬಿ ಐ ಬ್ಯಾಂಕ್ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಲಾಗಿದ್ದು, ಶೀಘ್ರದಲ್ಲಿ ದರೋಡೆಕೋರರನ್ನು ಪತ್ತೆ ಹಚ್ಚಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.ಝಳಕಿ ಪ್ರವಾಸಿ ಮಂದಿರದಲ್ಲಿ ಸುದ್ದಿದಾರರಿಗೆ ಮಾಹಿತಿ ನೀಡಿ, ನಿನ್ನೆ ಸಾಯಂಕಾಲ6-30‌ ರಿಂದ 7-30 ರ ವೇಳೆ ದರೋಡೆ ನಡೆದಿದೆ. ಬ್ಯಾಂಕ್ ಕ್ಲೋಜಿಂಗ್ ಟೈಂನಲ್ಲಿ ಘಟನೆ ನಡೆದಿದೆ.ದರೋಡೆಕೋರರ ಪೈಕಿ ಒಬ್ಬ ವ್ಯಕ್ತಿ ಬ್ಯಾಂಕ್ ಖಾತೆ ಮಾಡುವ ನೆಪದಲ್ಲಿ ಬಂದು ಬ್ಯಾಂಕಿನ ಒಳಗಡೆ ಕುಳಿತಿದ್ದ.ಬ್ಯಾಂಕ್ ಕ್ಲೋಜಿಂಗ್ ಟೈಂನಲ್ಲಿ…

Read More

ಚಡಚಣದಲ್ಲಿ ಎಸ್ ಬಿ ಐ ಬ್ಯಾಂಕ್ ದರೋಡೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 16:ಮುಸುಕುಧಾರಿ ದರೋಡೆಕೋರರ ಗುಂಪೊಂದು ಜಿಲ್ಲೆಯ ಚಡಚಣ ಪಟ್ಟಣದ ಎಸ್ ಬಿ ಐ ಬ್ಯಾಂಕಿಗೆ ಮಂಗಳವಾರ ರಾತ್ರಿ 8ಗಂಟೆ ಸುಮಾರಿಗೆ ನುಗ್ಗಿ ನಗದು, ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದೆ.ಐದಕ್ಕೂ ಹೆಚ್ಚು ಮುಸುಕುಧಾರಿ ದರೋಡೆಕೋರರಿಂದ ಈ ಕೃತ್ಯ ನಡೆದಿದ್ದು, ಮಿಲಿಟರಿ ಮಾದರಿ ಬಟ್ಟೆಯಲ್ಲಿ ಕೈಯಲ್ಲಿ ಕಂಟ್ರಿ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ ಎಸ್ ಬಿ ಐ ಬ್ಯಾಂಕ್ ನಲ್ಲಿನ‌ ಮ್ಯಾನೇಜರ್, ಕ್ಯಾಶಿಯರ್ ಹಾಗೂ ಇತರೆ ಸಿಬ್ಬಂದಿಗಳಿಗೆ ಹೆದರಿಸಿ ಕೈಕಾಲು ಕಟ್ಟಿ ಕೂಡಿ ಹಾಕಿ ದರೋಡೆ ನಡೆಸಲಾಗಿದೆ.ಬ್ಯಾಂಕಿನಲ್ಲಿದ್ದ…

Read More

ಕಳುವಾದ ಅಡಿವಿಟ್ಟ ಚಿನ್ನಕ್ಕೆ ಪ್ರಸ್ತುತ ಮಾರುಕಟ್ಟೆ ಬೆಲೆ ನೀಡಬೇಕೆಂದು ಆಗ್ರಹಿಸಿ ಗ್ರಾಹಕರಿಂದ ಬ್ಯಾಂಕ್ ಎದುರು ಪ್ರತಿಭಟನೆ

ಸಪ್ತಸಾಗರ ವಾರ್ತೆ ವಿಜಯಪುರ, ಆ. 28:ಬ್ಯಾಂಕಿನಲ್ಲಿ ಕಳುವಾದ ಚಿನ್ನಕ್ಕೆ ಪರಿಹಾರ ರೂಪದಲ್ಲಿ ಪ್ರಸ್ತುತ ಮಾರುಕಟ್ಟೆ ಬೆಲೆ ನೀಡಬೇಕೆಂದು ಆಗ್ರಹಿಸಿ ಗ್ರಾಹಕರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಕೆನೆರಾ ಬ್ಯಾಂಕ್ ಎದುರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ.ಕಳೆದ ಮೇ 25ರಂದು ಮನಗೂಳಿ ಕೆನರಾ ಬ್ಯಾಂಕ್ ನಲ್ಲಿ ಕಳ್ಳತನ ಪ್ರಕರಣ ನಡೆದಿತ್ತು. ಕಳ್ಳರು ಈ ಬ್ಯಾಂಕಿನಿಂದ 58 ಕೆಜಿಗೂ ಅಧಿಕ ಚಿನ್ನ, 5 ಲಕ್ಷ ನಗದು ಹಣ ಕದ್ದು ಪರಾರಿಯಾಗಿದ್ದ‌ರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಮ್ಯಾನೇಜರ್ ಸೇರಿ 15…

Read More

ಮನಗೂಳಿ ಕ್ಯಾನರಾ ಬ್ಯಾಂಕ್ ಕಳ್ಳತನ ಪ್ರಕರಣ: ಮತ್ತೆ 12 ಜನರ ಬಂಧನ, 39 ಕೆಜಿ ಬಂಗಾರ ಹಾಗೂ 1.16 ಕೋಟಿ ನಗದು ಜಫ್ತು

ಸಪ್ತಸಾಗರ ವಾರ್ತೆ ವಿಜಯಪುರ, ಜು. 11: ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 12 ಜನರನ್ನು ಬಂಧಿಸಲಾಗಿದ್ದು, ಇದುವರೆಗೆ ಬಂದಿದ್ದರ ಸಂಖ್ಯೆ 15ಕ್ಕೇರಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಚೇತನಕುಮಾರ ರಾಠೋಡ ತಿಳಿಸಿದ್ದಾರೆ.ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಪೊಲೀಸರು 3 ಆರೋಪಿಗಳನ್ನು ಬಂಧಿಸಿದ್ದಾರೆ. ಅವರು ನೀಡಿದ ಮಾಹಿತಿಯನ್ನು ಆಧರಿಸಿಪ್ರಕರಣದ ಮತ್ತೆ 12 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.ಮೇ 25ರಂದು ಮನಗೂಳಿ ಕೆನರಾ…

Read More