
ವೃಕ್ಷಥಾನ್ ಹೆರಿಟೇಜ್ ರನ್: ಹೆಚ್ಚೆಚ್ಚು ಪಾಲ್ಗೊಳ್ಳಿ-ಶ್ರೀ ಶಿವಯೋಗೇಶ್ವರ ಸ್ವಾಮೀಜಿ
ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 15: ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್- 2025ರಲ್ಲಿ ಪಾಲ್ಗೊಳ್ಳಬೇಕು ಎಂದು ಕಾಖಂಡಕಿ ಗುರುದೇವ ಆಶ್ರಮದ ಶ್ರೀ ಶಿವಯೋಗೇಶ್ವರ ಸ್ವಾಮೀಜಿ ಭಕ್ತರಿಗೆ ಕರೆ ನೀಡಿದ್ದಾರೆ.ರವಿವಾರ ಕಾಖಂಡಕಿಯಲ್ಲಿ ಆಶ್ರಮಕ್ಕೆ ತೆರಳಿದ ವೃಕ್ಷಥಾನ್ ಹೆರಿಟೇಜ್ ಕೋರ್ ಕಮಿಟಿ ಸದಸ್ಯರಾದ ಡಾ. ರಾಜು ಯಲಗೊಂಡ, ವೀರೇಂದ್ರ ಗುಚ್ಚೆಟ್ಟಿ ಹಾಗೂ ವಿನಯಕುಮಾರ ಎ. ಕಂಚ್ಯಾಣಿ ಅವರು ಸ್ವಾಮೀಜಿಯನ್ನು ಭೇಟಿ ಮಾಡಿ ಹೆರಿಟೇಜ್ ರನ್ ನಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರು.ಈ ಆಹ್ವಾನ ಸ್ವೀಕರಿಸಿ ಮಾತಮಾಡಿದ…