ವಿಜಯಪುರದಲ್ಲಿ ಚಳಿ ಲೆಕ್ಕಿಸದೇ ಓಡಿದ ಓಟಗಾರರು….!
ಸಪ್ತಸಾಗರ ವಾರ್ತೆ ವಿಜಯಪುರ, ಡಿ. 7 :ಮೈ ಕೊರೆವ ಚಳಿ ಲೆಕ್ಕಿಸದೇ ನೂರಾರು ಓಟಗಾರರು ವಿಜಯಪುರದ ಪ್ರಮುಖ ಬೀದಿಗಳಲ್ಲಿ ಭಾನುವಾರ ಬೆಳ್ಳಂಬೆಳಗ್ಗೆಓಡುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದರು.ಪರಿಸರ ರಕ್ಷಣೆಯ ಧ್ಯೇಯದೊಂದಿಗೆ ನಡೆದ ಮ್ಯಾರಾಥಾನ್ ಯಶಸ್ವಿಯಾಗಿ ನಡೆಯಿತು.ಡಾ.ಬಿ.ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡ ಮ್ಯಾರಾಥಾನ್‌ನಲ್ಲಿ ಪರಿಸರ ರಕ್ಷಣೆಯ ಕಾಳಜಿಯ ರಣ ಕಹಳೆ ಮೊಳಗಿತು.ಎಲ್ಲೆಡೆ ಹಳದಿ ವರ್ಣದ ಟೀ-ಶರ್ಟ್ ಧರಿಸಿ ಉತ್ಸಾಹದಿಂದ ಓಟದಲ್ಲಿ ಪಾಲ್ಗೊಂಡ ಯುವಕರ, ಹಿರಿಯ ದಂಡು ಕಂಡು ಬಂದಿತು. ಓಡು…ಓಡು….ಪರಿಸರಕ್ಕಾಗಿ ಓಡು ಎಂಬ ದಿವ್ಯ ಸಂದೇಶದೊಂದಿಗೆ…


