
ಸಾಹಿತಿ ಭೈರಪ್ಪ ನಿಧನಕ್ಕೆ ಯುವ ಭಾರತ ಸಂಸ್ಥೆ ಶ್ರದ್ಧಾಂಜಲಿ, ನುಡಿನಮನ
ಸಪ್ತಸಾಗರ ವಾರ್ತೆ ವಿಜಯಪುರ, ಸೆ. 24 ಅಕಾಲಿಕವಾಗಿ ನಿಧನರಾದ ಸಾಹಿತ್ಯದ ಮೇರು ದಿಗ್ಗಜ ದಿ.ಎಸ್.ಎಲ್. ಭೈರಪ್ಪ ಅವರಿಗೆ ಯುವ ಭಾರತ ಸಂಸ್ಥೆ ವತಿಯಿಂದ ಸಿದ್ಧೇಶ್ವರ ದೇವಸ್ಥಾನದ ಹತ್ತಿರ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ನುಡಿನಮನ ಅರ್ಪಿಸಲಾಯಿತು.ನುಡಿನಮನ ಅರ್ಪಿಸಿದ ಯುವ ಭಾರತ ಸಂಸ್ಥಾಪಕ ಉಮೇಶ ಕಾರಜೋಳ ಮಾತನಾಡಿ, ಕನ್ನಡ ಸಾರಸ್ವತ ಲೋಕದ ಮಹಾನ್ ದಿಗ್ಗಜ ಡಾ.ಎಸ್.ಎಲ್. ಭೈರಪ್ಪ ಅವರ ಅಕಾಲಿಕ ನಿಧನದಿಂದ ನಾವು ಒಬ್ಬ ಶ್ರೇಷ್ಠ ಚಿಂತಕ, ಸಾಹಿತಿಯನ್ನು ಕಳೆದುಕೊಂಡಿದ್ದೇವೆ,ಅವರ ಅನೇಕ ಕಾದಂಬರಿಗಳು ಬೇರೆ…