ಜೀವನ್ಮುಕ್ತಿಗೆ ಗುರೂಪದೇಶ ಬೇಕು:ಡಾ. ಮೇತ್ರಿ

ಸಪ್ತಸಾಗರ ವಾರ್ತೆ, ಜು. 31:ಹಿಂದೂಗಳಿಗೆ ಶ್ರಾವಣ ಮಾಸ ಒಂದು ಪವಿತ್ರ ಹಬ್ಬ. ಸತ್ಸಂಗದಲ್ಲಿ ಪಾಲ್ಗೊಂಡು ಪುರಾಣ ಪ್ರವಚನಗಳನ್ನು ಶ್ರವಣ ಮಾಡಿದರೆ ಆತ್ಮಾನಂದ ಪ್ರಾಪ್ತಿಯಾಗುವುದು. ಎಲ್ಲರೂ ಕ್ರಮವಾಗಿ ಶ್ರವಣ,ಜಪ,ತಪ,ಧ್ಯಾನ ಮತ್ತು ದಾನಗಳೆಂಬ ಪಂಚ ಕ್ರಿಯೆಗಳನ್ನು ಸಿದ್ಧಿಸಿಕೊಳ್ಳಬೇಕೆಂದು ಡಾ.ಸಂಗಮೇಶ ಮೇತ್ರಿಯವರು ಹೇಳಿದರು.ವಿಜಯಪುರ ಕೀರ್ತಿನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರವಚನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರವಚನಕಾರರಾದ ಪ.ಪೂ.ಶ್ರೀ ಸಂಗಮೇಶ ಸ್ವಾಮಿಗಳು ಶ್ರೀ ಸಿದ್ಧಾರೂಢರ ಆಧ್ಯಾತ್ಮಿಕ ಪ್ರವಚನವನ್ನು ಶುಭಾರಂಭ ಮಾಡಿದರು. ಸದ್ಭಕ್ತರು ಪ್ರಪಂಚದೊಡನೆ ಪರಮಾರ್ಥ ಸಾಧಿಸಲು ಗುರು ತೋರುವ ಪಥದಲ್ಲಿ…

Read More