ಆ. 23ರಂದು ವಿಜಯಪುರದಲ್ಲಿ ಸಂಗೊಳ್ಳಿ ರಾಯಣ್ಣನ ಬೃಹತ್ ಜಾತ್ರೆ
ವಿಜಯಪುರದಲ್ಲಿ ಮೊದಲ ಬಾರಿಗೆ ಆಯೋಜನೆ; 12 ಅಡಿ ಎತ್ತರದ ರಾಯಣ್ಣನ ಮೂರ್ತಿಯ ಭವ್ಯ ಮೆರವಣಿಗೆ ಸಪ್ತಸಾಗರ ವಾರ್ತೆ,ವಿಜಯಪುರ, ಆ. 20:ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಸಮಿತಿ ವತಿಯಿಂದ ಇದೇ ಮೊದಲ ಬಾರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಬೃಹತ್ ಜಾತ್ರಾ ಮಹೋತ್ಸವವನ್ನು ಆ. 23ರಂದು ನಗರದ ದರಬಾರ ಪ್ರೌಢಶಾಲೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಹುಲಿಜಂತಿ ಪಟ್ಟದ ಶ್ರೀ ಮಹಾಳಿಂಗರಾಯ ಮಹಾರಾಜರು ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಕರಲ್ಲಿ ದೇಶಭಕ್ತಿ, ಶೌರ್ಯ, ಪರಾಕ್ರಮ, ಧೈರ್ಯ ಹಾಗೂ ಸ್ಥೈರ್ಯ ಬೆಳೆಸುವ…


