ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ : ಮಾಲಾಧಾರಿ ಅಭಿಯಾನದ ಪೂರ್ವಭಾವಿ ಸಭೆ
ಸಪ್ತಸಾಗರ ವಾರ್ತೆ, ವಿಜಯಪುರ, ಜ. 11: ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಮಾಲಾಧಾರಿ ಅಭಿಯಾನದ ಪೂರ್ವಭಾವಿ ಸಭೆಯನ್ನು ಭಾನುವಾರ ಜಿಲ್ಲೆಯ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಯಿತು.ಸಭೆಯ ದಿವ್ಯ ಸಾನ್ನಿಧ್ಯವನ್ನು ಶ್ರೀ ಸಂಜು ಮಹಾರಾಜ ಆಹೇರಿ ಅವರು ವಹಿಸಿದ್ದರು. ಮಾಲಾಧಾರಿ ಅಭಿಯಾನದ ಮುಖಂಡ ಡಾ. ಬಾಬುರಾಜೇಂದ್ರ ನಾಯಕ ಅವರ ನೇತೃತ್ವದಲ್ಲಿ ಸಭೆ ಜರುಗಿತು.ಈ ಸಂದರ್ಭದಲ್ಲಿ ಮಾತನಾಡಿದ ಡಾ. ಬಾಬುರಾಜೇಂದ್ರ ನಾಯಿಕ ಅವರು ಮಾಲಾಧಾರಣೆಯ ಮಹತ್ವ, ಅದರ ಉದ್ದೇಶ ಹಾಗೂ ಸಮಾಜದಲ್ಲಿ ಅದರ ಪಾತ್ರದ ಕುರಿತು ವಿವರವಾಗಿ…


