
ಮಧುರಚೆನ್ನರ ಸಾಹಿತ್ಯಿಕ ಕಾರ್ಯ ಅನುಪಮವಾದುದು- ಸಂತೋಷ ಬಂಡೆ
ಸಪ್ತಸಾಗರ ವಾರ್ತೆ, ವಿಜಯಪುರ, ಜು. 31:ಕನ್ನಡ ನವೋದಯದ ಪ್ರಾರಂಭಿಕ ಕಾಲದಲ್ಲಿನ ಮಹತ್ವದ ಬರಹಗಾರರಾದ ಮಧುರಚೆನ್ನರ ಸಾಹಿತ್ಯಿಕ ಕಾರ್ಯ ಅನುಪಮವಾದುದು. ಅವರು ಶಾಸನಗಳು, ಜನಪದ ಸಾಹಿತ್ಯದ ಸಂಶೋಧನೆ ಮಾಡುತ್ತಾ, ಆಧ್ಯಾತ್ಮಿಕ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಗುರುವಾರ ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ಮಧುರಚೆನ್ನರ 122 ನೇ ಜನ್ಮ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಗ್ರಾಮೀಣ ಪ್ರದೇಶದಲ್ಲಿದ್ದು ಮಧುರಚೆನ್ನರು ಕಾವ್ಯ, ಆತ್ಮಕಥನ, ಸಂಶೋಧನೆ, ಜನಪದ ಸಾಹಿತ್ಯದಂತಹ ಪ್ರಕಾರಗಳಲ್ಲಿ ಮಾಡಿದ…