ಶಾಲಾ ಬಸ್ ಚಕ್ರಕ್ಕೆ ಬಾಲಕಿ ಬಲಿ!ಪದ್ಮನಗರದಲ್ಲಿ ದುರಂತ; ಮೂರೂವರೆ ವರ್ಷದ ಶ್ರೀಶಾ ಸ್ಥಳದಲ್ಲೇ ಸಾವು
ಸಪ್ತಸಾಗರ ವಾರ್ತೆ,ವಿಜಯಪುರ, ಆ.11:ಶಾಲಾ ಬಸ್ ಚಾಲಕನ ಅಜಾಗರೂಕತೆ ಹಾಗೂ ಅತಿವೇಗದ ಚಾಲನೆಗೆ ಮೂರೂವರೆ ವರ್ಷದ ಬಾಲಕಿಯೊಬ್ಬಳು ಬಲಿಯಾಗಿರುವ ಹೃದಯವಿದ್ರಾವಕ ಘಟನೆ ನಗರದ ಪದ್ಮನಗರದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.ಸಂಗನಬಸವ ಶಿಶುನಿಕೇತನ ಶಾಲೆಯ ಬಸ್ನ್ನು ಚಾಲಕ ಕೆಐಡಿಬಿ ರಸ್ತೆಯಿಂದ ಪದ್ಮನಗರದ ಒಳರಸ್ತೆಯಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ.ಈ ವೇಳೆ ಮನೆಯ ಮುಂಭಾಗ ರಸ್ತೆಯ ಬದಿಯಲ್ಲಿ ನಿಂತಿದ್ದ ಶ್ರೀಶಾ ಸುಹಾಸ ವಾಡಿ (3.5) ಎಂಬ ಬಾಲಕಿಗೆ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಬಾಲಕಿ ಸ್ಥಳದಲ್ಲೇ…


