
ತಿಕೋಟದಲ್ಲಿ ಸೆ. 21 ರಿಂದ ಮೂರು ದಿನಗಳ ಕಾಲ ದ್ರಾಕ್ಷಿ ಬೆಳೆ ವಿಚಾರ ಸಂಕಿರಣ
ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 18 :ಸೆ. 21ರಿಂದ ಮೂರು ದಿನಗಳ ಕಾಲಜಿಲ್ಲೆಯ ತಿಕೋಟಾದ ಕನಕದಾಸ ಭವನದಲ್ಲಿ ರಾಜ್ಯಮಟ್ಟದ ದ್ರಾಕ್ಷಿ ವಿಚಾರ ಸಂಕಿರಣ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಪ್ರಾದೇಶಿಕ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ ತಿಳಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ದ್ರಾಕ್ಷಿ ಬೆಳೆಗಾರರು ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಅನೇಕ ತೆರನಾದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳ ನಿವಾರಣೆಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಾಗಿರುವುದು ಅಗತ್ಯವಾಗಿದೆ, ಈ ನಿಟ್ಟಿನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಸಮಗ್ರ ಚಿಂತನ-ಮಂಥನ ನಡೆಸಲಾಗುವುದು. ಕರ್ನಾಟಕ…