ಆದರ್ಶ ಶಿಕ್ಷಕನಿಗೆ ಸಾರೋಟದಲ್ಲಿ ಭವ್ಯ ಮೆರವಣಿಗೆ: ಕರ್ತವ್ಯ ನಿರ್ವಹಿಸುವ ಶಾಲೆಗೆ ₹ 51 ಸಾವಿರ ದೇಣಿಗೆ
ಸಪ್ತಸಾಗರ ವಾರ್ತೆ ವಿಜಯಪುರ, ಸೆ. 12: ತಾಲ್ಲೂಕಿನ ಜಂಬಗಿ (ಆ) ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಶಿಕ್ಷಕ ರಾಜಕುಮಾರ ಮಾಳಿ ಅವರಿಗೆ 2025-26 ನೇ ಶೈಕ್ಷಣಿಕ ಸಾಲಿನ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಪ್ರಯುಕ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮಸ್ಥರು ಸಾರೋಟದಲ್ಲಿ ಭವ್ಯ ಮೆರವಣಿಗೆ ಮಾಡುವ ಮೂಲಕ ಗೌರವ ಸಲ್ಲಿಸಿದರು.ಸಾರೋಟದಲ್ಲಿ ಮುಖ್ಯೋಪಾಧ್ಯಾಯನಿ ಎಲ್.ಎಂ. ದಿಗ್ಗಾಯಿ ಆಸೀನರಿದ್ದರು.ಶಿಕ್ಷಕ ಮಾಳಿ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದಿರುವುದಕ್ಕೆ ಗ್ರಾಮಸ್ಥರು, ಹಿರಿಯರು, ಯುವಕರು, ಮಕ್ಕಳು ಖುಷಿ ಇಮ್ಮಡಿಗೊಂಡಿತ್ತು. ಮೆರವಣಿಗೆ ಸಾಗುವಾಗ ವಾದ್ಯ…


