ವಿಜಯಪುರ ಜಿಲ್ಲೆಯಲ್ಲಿ ಹಲವೆಡೆ ಭೂಕಂಪನ

ಸಪ್ತಸಾಗರ ವಾರ್ತೆ ,ವಿಜಯಪುರ,ಅ.ll:ಜಿಲ್ಲೆಯ ತಿಕೋಟ ಹಾಗೂ ವಿಜಯಪುರ ತಾಲೂಕಿನ ಹಲವೆಡೆ ಜನರಿಗೆ ಭೂಕಂಪನದ ಅನುಭವವಾಗಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.ಹೊನ್ನುಟಗಿ, ಕವಲಗಿ, ಕಗ್ಗೋಡ, ಮಧಬಾವಿ, ದ್ಯಾಬೇರಿ ಭಾಗಗಳು ಸೇರಿದಂತೆ, ತಿಕೋಟ ತಾಲೂಕಿನ ಹಲವೆಡೆ ಭೂಮಿ ಕಂಪಿಸಿದೆ.ಶುಕ್ರವಾರ ರಾತ್ರಿ 10:01 ಕ್ಕೆ ಭೂಕಂಪನ ಅನುಭವ ಆಗಿದೆ.ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ವಿಜಯಪುರ ಗ್ರಾಮೀಣ ಭಾಗದ 12 ಕಿ.ಮೀ ಸುತ್ತಮುತ್ತ ಭೂಕಂಪನದ ಅನುಭವ ಆಗಿದೆ. ಭೂಕಂಪನ ಆಪ್‌ಗಳಲ್ಲೂ ಭೂಕಂಪನ ತೀವ್ರತೆ ದಾಖಲಾಗಿದೆ. 2.8 ರಷ್ಟು ಭೂಕಂಪನದ ತೀವ್ರತೆ ದಾಖಲಾಗಿದ್ದು, ಮೇಲಿಂದ…

Read More

ಆಡುಗೋಡಿಯಲ್ಲಿ ಸಿಲಿಂಡರ್ ಸ್ಪೋಟ: ಓರ್ವ ಬಾಲಕ ಸಾವು, ಹಲವರಿಗೆ ಗಾಯ

ಸಪ್ತಸಾಗರ ವಾರ್ತೆ, ಬೆಂಗಳೂರು, ಆ. 15:ರಾಜ್ಯವೂ ಸೇರಿದಂತೆ ಇಡೀ ದೇಶದ ತುಂಬೆಲ್ಲ 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಜನತೆ ಮುಳುಗಿರುವಾಗಲೇ ನಗರದ ಆಡುಗೋಡಿಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಓರ್ವ ಬಾಲಕ ಮೃತಪಟ್ಟು ಹಲವರು ಗಾಯಗೊಂಡಿರುವ ದಾರುಣ ದುರಂತ ನಡೆದು ಜನರ ಮನ ಕಲಕುವಂತೆ ಮಾಡಿದೆ.ಮುಬಾರಕ್ (8) ಎಂಬ ಬಾಲಕ ಸಿಲಿಂಡರ್ ಸ್ಫೋಟ ದುರಂತದಲ್ಲಿ ಮೃತಪಟ್ಟಿದ್ದು, ಇತರ 8 ಜನರು ಗಾಯಗೊಂಡಿದ್ದಾರೆ. ಈ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ.ಆಡುಗೋಡಿಯ ತಿಮ್ಮರಾಜು ಎಂಬುವವರ ಮನೆಯಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದ್ದು, ಆ ಮನೆ ಸಂಪೂರ್ಣ…

Read More