ಭುವನೇಶ್ವರದ ಆರ್ಟ್ ಆಫ್ ಗಿವಿಂಗ್ ಸಂಚಾಲಕಿಯಾಗಿ ಶಿಫಾ ಜಮಾದಾರ ನೇಮಕ
ಸಪ್ತಸಾಗರ ವಾರ್ತೆ ವಿಜಯಪುರ, ಮೇ. 10:ಸಮಾಜ ಸೇವೆ, ಯುವ ಸಬಲೀಕರಣ, ನೊಂದವರಿಗೆ ಸೇವೆ ಮಾಡುವ ದಿವ್ಯ ಧ್ಯೇಯೋದ್ದೇಶಗಳನ್ನು ಹೊಂದಿರುವ ದೇಶದ ಪ್ರತಿಷ್ಠಿತ ಭುವನೇಶ್ವರದ ಆರ್ಟ್ ಆಫ್ ಗಿವಿಂಗ್ ಕರ್ನಾಟಕ ಸಂಚಾಲಕರಾಗಿ ವಿಜಯಪುರದ ಕುಮಾರಿಶಿಫಾ ಜಮಾದಾರ ಅವರನ್ನು ನೇಮಕ ಮಾಡಿ ಮಹತ್ವದ ಜವಾಬ್ದಾರಿ ನೀಡಲಾಗಿದೆ.ಇಂಜನಿಯರಿಂಗ್ ಪದವಿಯನ್ನು ವ್ಯಾಸಾಂಗ ಮಾಡುತ್ತಿರುವ ಶಿಫಾ ವಿದ್ಯಾರ್ಥಿ ದೆಸೆಯಲ್ಲಿಯೇಯುವಜನರ ಶ್ರೇಯೋಭಿವೃದ್ಧಿ, ಯುವತಿಯರಿಗೆ ಆರೋಗ್ಯ ಜಾಗೃತಿಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.ಇತ್ತೀಚಿಗೆ ರಷ್ಯಾದಲ್ಲಿ ನಡೆದ ಯುವ ಶೃಂಗ ಸಭೆಯಲ್ಲಿ ಭಾರತ ದೇಶವನ್ನುಪ್ರತಿನಿಧಿಸಿದ್ದರು. ರಷ್ಯಾ ಅಧ್ಯಕ್ಷ ವಾಡ್ಲೀಮಿರ್ ಪುಟೀನ್ ಚಾಲನೆ…


