₹29.16 ಕೋಟಿ ನಿವ್ವಳ ಲಾಭ: ವಿಜಯಪುರ ಡಿಸಿಸಿ ಬ್ಯಾಂಕ್ಗೆ ಹೊಸ ಮೈಲುಗಲ್ಲು
₹8,075.56 ಕೋಟಿ ದಾಖಲೆಯ ವಹಿವಾಟು; 2.55 ಲಕ್ಷ ರೈತರಿಗೆ ₹2,115 ಕೋಟಿ ಕೃಷಿ ಸಾಲ ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 12:ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ 2025-26ನೇ ಸಾಲಿನಲ್ಲಿ ಅಭೂತಪೂರ್ವ ಪ್ರಗತಿ ದಾಖಲಿಸಿದ್ದು, ₹8,075.56 ಕೋಟಿ ದಾಖಲೆಯ ವಹಿವಾಟು ನಡೆಸುವುದರೊಂದಿಗೆ ₹29.16 ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಬ್ಯಾಂಕಿನ ಇತಿಹಾಸದಲ್ಲೇ ಸಾರ್ವಕಾಲಿಕ ಗರಿಷ್ಠ ವಾರ್ಷಿಕ ಲಾಭವಾಗಿದ್ದು, ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಸಚಿವ…


