ಸಿಳ್ಳೆಕ್ಯಾತ–ಕಿಳ್ಳೆಕ್ಯಾತ ಸಮುದಾಯದಿಂದ ಶಾಸಕ ಚಿಮ್ಮನಕಟ್ಟಿಗೆ ಸನ್ಮಾನ
ಸಪ್ತಸಾಗರ ವಾರ್ತೆ, ಬಾದಾಮಿ, ಮಾ. 22ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರದ ಶಾಸಕ ಭೀಮಸೇನ ಬಿ. ಚಿಮ್ಮನಕಟ್ಟಿ ಅವರಿಗೆ ಸಿಳ್ಳೆಕ್ಯಾತ–ಕಿಳ್ಳೆಕ್ಯಾತ ಸಮುದಾಯದ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಅವರ ಗೃಹ ಕಚೇರಿಯಲ್ಲಿ ಆಯೋಜಿಸಲಾಯಿತು.ವಿಧಾನಸಭಾ ಅಧಿವೇಶನದಲ್ಲಿ ಸಿಳ್ಳೆಕ್ಯಾತ–ಕಿಳ್ಳೆಕ್ಯಾತ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ನೀಡುವಲ್ಲಿ ಎದುರಾಗುತ್ತಿರುವ ಸಮಸ್ಯೆಯನ್ನು ಚುಕ್ಕೆ ಗುರುತಿನ ಪ್ರಶ್ನೆಯ ಮೂಲಕ ಸದನದಲ್ಲಿ ಪ್ರಸ್ತಾಪಿಸಿದ್ದಕ್ಕಾಗಿ ಸಮುದಾಯದ ಮುಖಂಡರು ಮತ್ತು ಬಂಧುಗಳು ಕೃತಜ್ಞತೆ ಸಲ್ಲಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು ಮಾತನಾಡಿ, ಸಿಳ್ಳೆಕ್ಯಾತ–ಕಿಳ್ಳೆಕ್ಯಾತರು ಅತ್ಯಂತ ಹಿಂದುಳಿದ ಅಲೆಮಾರಿ ಸಮುದಾಯವಾಗಿದ್ದು, ಜಾತಿ ಪ್ರಮಾಣಪತ್ರ ಪಡೆಯುವಲ್ಲಿ…


