
ಸ್ಕೇಟಿಂಗ್ ಸ್ಪರ್ಧೆಯಲ್ಲಿ ಬಿಎಲ್ ಡಿಇ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
ಸಪ್ತಸಾಗರ ವಾರ್ತೆ, ವಿಜಯಪುರ, ಆ. 17: ಬಿ.ಎಲ್.ಡಿ.ಇ ಸಂಸ್ಥೆಯ ಜಮಖಂಡಿಯಲ್ಲಿರುವ ಬಿ.ಎಲ್.ಡಿ.ಇ ಸ್ಪೋರ್ಟ್ ಅಕಾಡೆಮಿಯ ವಿದ್ಯಾರ್ಥಿಗಳು 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ 79 ನಿಮಿಷಗಳ ಸತತ ಸ್ಕೇಟಿಂಗ್ ನಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.ಯುನೈಟೆಟ್ ಸ್ಟೇಟ್ ಆಫ್ ಅಮೇರಿಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಜೀನಿಯಸ್ ಇಂಡಿಯನ್ ಬುಕ್ ಆಫ್ ವರ್ಡ್ಲ್ ರೆಕಾರ್ಡ್ಸ್ ಮತ್ತು ಯು. ಎನ್. ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಜಂಟಿಯಾಗಿ ಶುಕ್ರವಾರ ದೇಶಾದ್ಯಂತ ಜಿಲ್ಲಾ ಕೇಂದ್ರದಲ್ಲಿ ಸ್ಕೇಟಿಂಗ್ ಆಯೋಜಿಸಿತ್ತು….