ಮನೆಯಲ್ಲಿಯೇ ನಾಗದೇವತೆಗೆ ಹಾಲೆರೆದ ನಾಗಠಾಣದ ಚಿಣ್ಣರು
ಸಪ್ತಸಾಗರ ವಾರ್ತೆ,ವಿಜಯಪುರ, ಆ. 16:ನಾಗರ ಪಂಚಮಿ ಹಬ್ಬದ ಅಂಗವಾಗಿ ತಾಲೂಕಿನ ನಾಗಠಾಣ ಗ್ರಾಮದ ಚಿಣ್ಣರಾದ ಅನುಶ್ರೀ, ಶ್ರೀನಿಧಿ ಹಾಗೂ ಆರುಷಿ ಬಂಡೆ ಅವರು ರವಿವಾರ ಮನೆಯಲ್ಲಿಯೇ ನಾಗದೇವತೆಗೆ ಭಕ್ತಿಭಾವದಿಂದ ಹಾಲೆರೆದು ಹಬ್ಬವನ್ನು ಸಡಗರದಿಂದ ಆಚರಿಸಿದರು.ನಾಗರ ಪಂಚಮಿ ಕುಟುಂಬದ ಶ್ರೇಯಸ್ಸು, ಆರೋಗ್ಯ ಹಾಗೂ ಸಂಪ್ರದಾಯದ ಆಚರಣೆಯ ಸಂಕೇತವಾಗಿದೆ. ಧರ್ಮ, ಸಂಸ್ಕಾರ ಹಾಗೂ ಜೀವಪರ ಕಾಳಜಿಯ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡುವಲ್ಲಿ ಇಂತಹ ಹಬ್ಬಗಳು ಪ್ರಮುಖ ಪಾತ್ರ ವಹಿಸುತ್ತವೆ.ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಪ್ರಕೃತಿ ಪ್ರೀತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ…


