ಆಧ್ಯಾತ್ಮ ಭಾರತೀಯರ ಉಸಿರು: ಸಂಗಮೇಶ ಬಬಲೇಶ್ವರ
ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 28:“ಜಗತ್ತಿಗೆ ವೇದೋಪನಿಷತ್ತುಗಳು ಹಾಗೂ ವಚನ ಸಾಹಿತ್ಯವನ್ನು ನೀಡಿದವರು ಭಾರತೀಯರು. ಆಧ್ಯಾತ್ಮ ನಮ್ಮ ಉಸಿರು, ಸಂಸ್ಕಾರಯುತ ಜೀವನ ನಮ್ಮ ಬದುಕಿನ ಬೆಳಕು. ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕಗಳಾಗಿದ್ದು, ಸಮಾಜಕ್ಕೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ ಶ್ರದ್ಧಾ ಕೇಂದ್ರಗಳಾಗಿವೆ” ಎಂದು ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ನಗರದ ಅಭಿವೃದ್ಧಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಅಭಯಾಂಜನೇಯ ದೇವಾಲಯದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿ ಬಡಾವಣೆಯ ದೇವಾಲಯಗಳಲ್ಲಿ…


