ಡೊಣಗಿ ದಂಪತಿಗಳಿಗೆ ರಾಜ್ಯ ಆದರ್ಶ ದಂಪತಿ ಪ್ರಶಸ್ತಿ ಪ್ರದಾನ
ಸಪ್ತಸಾಗರ ವಾರ್ತೆ, ವಿಜಯಪುರ, ಜ. 5 ಇಲ್ಲಿನ ಐಶ್ವರ್ಯ ನಗರದ ಶಿಕ್ಷಕ ಸಾಹಿತಿ ಶ್ರೀಮಂತ ಡೊಣಗಿ ಹಾಗೂ ಸಾಹಿತಿ ಬಂಗಾರೆವ್ವ ಡೊಣಗಿ ಅವರಿಗೆ ರಾಜ್ಯ ಆದರ್ಶ ದಂಪತಿ ಪ್ರಶಸ್ತಿ ಲಭಿಸಿದೆ.ಇದೇ ಜನೆವರಿ 4ರಂದು ನಗರದ ಚೇತನಾ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಡೊಣಗಿ ದಂಪತಿಗಳಿಗೆ ಸಮಾರಂಭದ ಸರ್ವಾಧ್ಯಕ್ಷ ಡಾ. ಪಂಚಯ್ಯ ಹಿರೇಮಠ, ಉದ್ಘಾಟಕರಾಗಿ ಆಗಮಿಸಿದ ಸಾಹಿತಿ ರಾಜಶೇಖರ ಮಠಪತಿ, ಸಮಾಜ ಸೇವಕ ಸೋಮನಗೌಡ ಅಪ್ಪು ಪಾಟೀಲ,ಸಾಹಿತಿ ಅಶೋಕ ಹಂಚಲಿ,ನಿಂಗನಗೌಡ ಪಾಟೀಲ, ಸುಜ್ಞಾನಿ ಪಾಟೀಲ ಮತ್ತಿತರರು ಪ್ರಶಸ್ತಿ ನೀಡಿ…


