ಸೃಜನಾತ್ಮಕ ಬರವಣಿಗೆಯ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ಸಪ್ತಸಾಗರ ವಾರ್ತೆ ವಿಜಯಪುರ, ನ. 11 : ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ “2025-26ನೇ ಸಾಲಿನ ಮಕ್ಕಳ ದಿನಾಚರಣೆ” ನಿಮಿತ್ತ ನಗರದ ಜಿಲ್ಲಾ ಬಾಲಭವನದಲ್ಲಿ ಹಮ್ಮಿಕೊಂಡ 9-16 ವರ್ಷದೊಳಗಿನ ಜಿಲ್ಲಾಮಟ್ಟದ ಸೃಜನಾತ್ಮಕ ಬರವಣಿಗೆಯ ಸ್ಪರ್ಧೆಗಳಲ್ಲಿ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಸಮನ್ವಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ.ಕತೆ, ಕವನ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ಕುಮಾರಿ ಶ್ರದ್ಧಾ ದತ್ತೂರೆ (ಪ್ರಥಮ ಸ್ಥಾನ) ಹಾಗೂ ಕುಮಾರಿ ವೈಭವಿ ಪತ್ತಾರ…


