
ಶಿಕ್ಷಕರು ಬಡವರಾಗಿದ್ದರೂ ಹೃದಯ ಶ್ರೀಮಂತರು: ಸೋಮನಾಳ
ಸಪ್ತಸಾಗರ ವಾರ್ತೆ ವಿಜಯಪುರ, ಸೆ. 6:ಶಿಕ್ಷಕರು ಆರ್ಥಿಕವಾಗಿ ಬಡವರಾದ್ದರೂ, ಹೃದಯದಿಂದ ಶ್ರೀಮಂತರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲ ಸಚಿವ (ಆಡಳಿತ) ಶಂಕರಗೌಡ ಸೋಮನಾಳ ಹೇಳಿದರು.ವಿಜಯಪುರ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ. ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ,ನಿರಂತರ ಅಧ್ಯಯನ, ಪ್ರಾಮಾಣಿಕ, ಸೃಜನಶೀಲತೆ ಮತ್ತು ಅತ್ಯುತ್ತಮ ಮೌಲ್ಯಗಳು, ಸಮರ್ಪಿತ ಗುಣಗಳು ಶಿಕ್ಷಕರು ಹೊಂದಿರಬೇಕು. ಶಿಕ್ಷಕರು ಆರ್ಥಿಕವಾಗಿ ಬಡವರಾಗಿದ್ದರೂ ಹೃದಯದಿಂದ ಶ್ರೀಮಂತರಾಗಿದ್ದಾರೆ ಪ್ರತಿಯೊಬ್ಬರಲ್ಲಿಯೂ ಶಿಕ್ಷಕರ ಸ್ವರೂಪವನ್ನು…