
ತಾಳಿಕೋಟೆಯಲ್ಲಿ ಕಳ್ಳರ ಚಡ್ಡಿ ಗ್ಯಾಂಗ್ ಸಿಸಿ ಕ್ಯಾಮೆರಾದಲ್ಲಿ ಸೆರೆ: ಜನರಲ್ಲಿ ಆತಂಕ
ಸಪ್ತಸಾಗರ ವಾರ್ತೆ,ವಿಜಯಪುರ, ಜು. 25:ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಕಾಣಿಸಿಕೊಂಡು ಜನರಲ್ಲಿ ಭಯದ ವಾತಾವರಣ ಮೂಡಿಸಿದೆ.ಈ ಹಿಂದೆ ವಿಜಯಪುರ ಜಿಲ್ಲೆಯಲ್ಲಿ ಚಡ್ಡಿ ಗ್ಯಾಂಗ್ ಜನರ ನಿದ್ರೆಗೆಡಿಸಿ ಭಯದ ವಾತಾವರಣ ಮೂಡಿಸಿತ್ತು. ಕೆಲವು ತಿಂಗಳುಗಳಿಂದ ಚಡ್ಡಿ ಗ್ಯಾಂಗ್ ಉಪಟಳ ಇಲ್ಲವಾಗಿ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಈಗ ಮತ್ತೆ ಜಿಲ್ಲೆಯ ತಾಳಿಕೋಟೆ ಪಟ್ಟಣದ ಗಣೇಶನಗರದಲ್ಲಿಚಡ್ಡಿ ಗ್ಯಾಂಗ್ ಕದೀಮರು ಬಾಲ ಬಿಚ್ಚಿದ್ದಾರೆ. ಈ ಕದೀಮರ ಚಲನವಲನ ಸಿಸಿ ಕೆಮೆರಾದಲ್ಲಿ ಸೆರೆಯಾಗಿದೆ.ಆರು ಜನರು ಇರುವ ಕಳ್ಳರ ಚಡ್ಡಿ ಗ್ಯಾಂಗ್…