ಶಿಕ್ಷಕಿಯ ಮೇಲೆ ಹಲ್ಲೆ: ಕ್ರಮಕ್ಕೆ ಬಿರಾದಾರ ಆಗ್ರಹ

ಸಪ್ತಸಾಗರ ವಾರ್ತೆ ವಿಜಯಪುರ, ಸೆ.14:ಕೆ ಜಿ ಫ್ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಕ್ಷೇತ್ರನ ಹಳ್ಳಿಯ ಎಚ್. ಪಿ .ಎಸ್ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಯ ತಂದೆಯೊಬ್ಬ ಶಿಕ್ಷಕಿಯೊಬ್ಬಳ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ ತೀವ್ರವಾಗಿ ಖಂಡಿಸಿದೆ.ಎಸ್. ಮಂಜುಳ ಎಂಬ ಶಿಕ್ಷಕಿಯ ಮೇಲೆ ಕಾರಣವಿಲ್ಲದೆ ವಿದ್ಯಾರ್ಥಿಯ ತಂದೆ ಹಲ್ಲೆ ಮಾಡಿದ ಕೃತ್ಯ ಅಮಾನವೀಯ ಪೈಶಾಚಿಕ ಕಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ಲತಾ ಬಿರಾದಾರ…

Read More

ಆದರ್ಶ ಶಿಕ್ಷಕನಿಗೆ ಸಾರೋಟದಲ್ಲಿ‌ ಭವ್ಯ ಮೆರವಣಿಗೆ: ಕರ್ತವ್ಯ ನಿರ್ವಹಿಸುವ ಶಾಲೆಗೆ ₹ 51 ಸಾವಿರ ದೇಣಿಗೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 12: ತಾಲ್ಲೂಕಿನ ಜಂಬಗಿ (ಆ) ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಶಿಕ್ಷಕ ರಾಜಕುಮಾರ ಮಾಳಿ ಅವರಿಗೆ 2025-26 ನೇ ಶೈಕ್ಷಣಿಕ ಸಾಲಿನ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಪ್ರಯುಕ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮಸ್ಥರು ಸಾರೋಟದಲ್ಲಿ ಭವ್ಯ ಮೆರವಣಿಗೆ ಮಾಡುವ ಮೂಲಕ ಗೌರವ ಸಲ್ಲಿಸಿದರು.ಸಾರೋಟದಲ್ಲಿ ಮುಖ್ಯೋಪಾಧ್ಯಾಯನಿ ಎಲ್.ಎಂ‌. ದಿಗ್ಗಾಯಿ ಆಸೀನರಿದ್ದರು.ಶಿಕ್ಷಕ ಮಾಳಿ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದಿರುವುದಕ್ಕೆ ಗ್ರಾಮಸ್ಥರು, ಹಿರಿಯರು, ಯುವಕರು, ಮಕ್ಕಳು ಖುಷಿ ಇಮ್ಮಡಿಗೊಂಡಿತ್ತು. ಮೆರವಣಿಗೆ ಸಾಗುವಾಗ ವಾದ್ಯ…

Read More

ಶಿಕ್ಷಕ ರತ್ನ ಜಿಲ್ಲಾ ಪ್ರಶಸ್ತಿಗೆ ಬಸವರಾಜ ಆಯ್ಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 8:ಕರಾಟೆ ತರಬೇತಿ ಶಿಕ್ಷಕ ಬಸವರಾಜ ಬಾಗೇವಾಡಿ ಉತ್ನಾಳ ಅವರು ಶಿಕ್ಷಕ ರತ್ನ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ದೇಶಿಯ ಮತ್ತು ವಿದೇಶಿಯ ಅನೇಕ ಕ್ರೀಡೆಗಳನ್ನು ಜಿಲ್ಲೆಗೆ ಮತ್ತು ರಾಜ್ಯಕ್ಕೆ ಪರಿಚಯಿಸಿ ಸ್ಥಾಪನೆ ಮಾಡಿ ಮತ್ತು ತರಬೇತಿ ನೀಡುತ್ತಿರುವದನ್ನು ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಪ್ರಸಕ್ತ ಸಾಲಿನ ಚಡಚಣ ತಾಲೂಕಿನ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಸೆ. 9 ರಂದು ಚಡಚಣದ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಗುರುವಂದನ ಕಾರ್ಯಕ್ರಮ ನಡೆಯಲಿದೆ.ಈ…

Read More

ಶಿಕ್ಷಕ ನಬಿ ಪಟೇಲ್ ವಡಿಗೇರಿ ಸೇವೆ ಶ್ಲಾಘನೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 7: ಹಲಸಂಗಿ ಮಧುರಚೆನ್ನರ ಒಡನಾಡಿಯಾಗಿದ್ದ ನಬಿಪಟೇಲ್ ವಡಗೇರಿ ಶಿಕ್ಷಕರ ಸೇವೆ ಶ್ಲಾಘನೀಯವಾಗಿದ್ದು, ಶಿಕ್ಷಣದೊಂದಿಗೆ ಸಾಮಾಜಿಕ ರಂಗದಲ್ಲೂ ಉತ್ಕೃಷ್ಠ ಸೇವೆ ಸಲ್ಲಿಸಿ ಶಿಷ್ಯಬಳಗದ ಹೃದಯದಲ್ಲಿ ಅಜರಾಮರರಾಗಿದ್ದಾರೆ ಎಂದು ಹಿರಿಯ ಸಾಹಿತಿ ಸಿದ್ದಣ್ಣ ಲಂಗೋಟಿ ಹೇಳಿದರು.ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಅಲ್‌ಹಜ್ ನಬಿಪಟೇಲ್ ವಡಗೇರಿಯವರ ಸಂಸ್ಮರಣ ಗ್ರಂಥ ವಡಗೇರಿ ನಮಃ, ಬಿ ಆರ್ ಪೊಲೀಸ್‌ಪಾಟೀಲ ರಚಿಸಿದ ತುಲಾಭಾರ ಪ್ರಸಂಗ ಹಾಗೂ ತುಲಾಭಾರ ನಾಟಕ ಗ್ರಂಥಗಳ ಲೋಕಾರ್ಪಣೆ ಹಾಗೂ ಆದರ್ಶ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ…

Read More

ಬಸವರಾಜಗೆ ಅತ್ಯುತ್ತಮ ಚಿತ್ರಕಲಾ ಶಿಕ್ಷಕ ಪ್ರಶಸ್ತಿ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 29 :ಇಲ್ಲಿನ ಸಂಗನಬಸವ ಶಿಶುನಿಕೇತನ (ಸಿ.ಬಿ.ಎಸ್.ಇ) ಶಾಲೆಯ ಚಿತ್ರಕಲಾ ಶಿಕ್ಷಕ ಬಸವರಾಜ ಹನಮಪ್ಪ ಹಡಪದ ಅವರಿಗೆ ಅತ್ಯುತ್ತಮ ಚಿತ್ರಕಲಾ ಶಿಕ್ಷಕ ಪ್ರಶಸ್ತಿ ಲಭಿಸಿದೆ.ಚಿತ್ರಕಲಾ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಪರಿಗಣಿಸಿ ಬಸವರಾಜ ಅವರಿಗೆ ಅತ್ಯುತ್ತಮ ಚಿತ್ರಕಲಾ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಚಿತ್ರಕಲಾ ಕ್ಷೇತ್ರದಲ್ಲಿ ಹಲವಾರು ಗುಂಪು ಚಿತ್ರಕಲಾ ಪ್ರದರ್ಶನ, ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಹಲವಾರು ಕಲಾಕೃತಿಗಳಿಗೆ ನಗದು ಬಹುಮಾನ, ಹಲವಾರು ಕಲಾಕೃತಿಗಳಿಗೆ ಅತ್ಯುತ್ತಮ ಕಲಾಕೃತಿ ಪ್ರಶಸ್ತಿಗಳು ಮತ್ತು ಹಲವಾರು ಕಲಾ ಶಿಬಿರಗಳು ಹಾಗೂ 2023-24…

Read More

ಎಲ್ಲರಿಗಿಂತಲೂ ಗುರು ಪರಮ ಶ್ರೇಷ್ಠ: ಕಡ್ಲಿಮಟ್ಟಿ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 11: ಹರ ಮುನಿದರೆ ಕಾಯುವ ಗುರು ಎಲ್ಲರಿಗಿಂತ ಪರಮ ಶ್ರೇಷ್ಠನಾಗಿದ್ದಾನೆ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಹೇಳಿದ್ದಾರೆ.ಗುರುವಾರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್(CBSE) ಶಾಲೆಯಲ್ಲಿ ನಡೆದ ಗುರು ಪೂರ್ಣಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಗತ್ತಿನಲ್ಲಿ ತಾಯಿ ಮತ್ತು ಗುರು ಮಾತ್ರ ನಿಷ್ಕಲ್ಮಶವಾದ ಪ್ರೀತಿ ಕೊಡಬಲ್ಲರು. ತಾಯಿ ಮತ್ತು ಗುರುವಿನ ಋಣದಿಂದ ಹೊರಬರಲು ಸಾಧ್ಯವಿಲ್ಲ. ಗುರುವಾದವರು. ನಿಷ್ಪಕ್ಷಪಾತವಾಗಿರಬೇಕು. ಧನಾತ್ಮಕ ಮನೋಭಾವ ಹೊಂದಿರಬೇಕು….

Read More