ಅಂಬಾ ಭವಾನಿ ದೇವಸ್ಥಾನದಲ್ಲಿ ನವರಾತ್ರೋತ್ಸವ ಸಂಪನ್ನ

ಸಪ್ತಸಾಗರ ವಾರ್ತೆ, ವಿಜಯಪುರ, ಅ.7 : ವಿಜಯಪುರ ನಗರದ ಕವತಾಳ ಲೇಔಟ್‌ನ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ನವರಾತ್ರೋತ್ಸವ ಭಕ್ತಿಭಾವದಿಂದ ಮತ್ತು ವೈಭವೋಪೇತವಾಗಿ ನೆರವೇರಿತು. ಕೊಜಾಗರಿ ಪೂರ್ಣಿಮೆಯ ದಿನದಂದು ಬೆಳಿಗ್ಗೆ ದೇವಿಗೆ ಮಹಾಪೂಜೆ ಹಾಗೂ ಅಲಂಕಾರ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲಾಯಿತು.ನಂತರ ಋತ್ವಿಜ ಗಣದ ನೇತೃತ್ವದಲ್ಲಿ ಚಂಡಿ ಹವನವನ್ನು ವೈದಿಕ ಪದ್ದತಿಯ ಪ್ರಕಾರ ಸಂಪನ್ನಗೊಳಿಸಲಾಯಿತು. ಮಧ್ಯಾಹ್ನ 1 ಗಂಟೆಗೆ ಪೂರ್ಣಾಹುತಿ ನಡೆದಿದ್ದು, ನಂತರ ಮಧ್ಯಾಹ್ನ 1.30ಕ್ಕೆ ಭಕ್ತರಿಗಾಗಿ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 11 ಗಂಟೆಗೆ ಗೊಂಧಳ ಕಾರ್ಯಕ್ರಮವೂ…

Read More

ನಾಳೆಯಿಂದ ಸಾರವಾಡದಲ್ಲಿಈಶ್ವರ ಹಾಗೂ ಮಾರುತಿ ದೇವರ ಜಾತ್ರೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ.13 :ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಶ್ರೀ ಈಶ್ವರ ಹಾಗೂ ಶ್ರೀ ಮಾರುತಿ ದೇವರ ಜಾತ್ರಾ ಮಹೋತ್ಸವವು ಇದೇ ದಿ.೧೪ ರಿಂದ ಐದು ದಿನಗಳವರೆಗೆ ವಿಜೃಂಭಣೆಯಿಂದ ಜರುಗಲಿದೆ.ಜಾತ್ರೆಯ ಅಂಗವಾಗಿ ವಿವಿಧ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ದಿ.14 ರಂದು ವಿವಿಧ ವಾದ್ಯ ಮೇಳ ಜಾಗೂ ಪಲ್ಲಕ್ಕಿ ಉತ್ಸವದೊಂದಿಗೆ ಕುಲಕರ್ಣಿ ಅವರ ಮನೆಯಿಂದ ಮಾರುತಿ ದೇವರ ಉತ್ಸವ ಮೂರ್ತಿಯನ್ನು ಮಾರುತಿ ದೇವಸ್ಥಾನಕ್ಕೆ ತಂದು ಬಳಿಕ ಓಕಳಿ ಕಂಬ ನಿಲ್ಲಿಸುವುದರೊಂದಿಗೆ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ…

Read More