ಮದುವೆಗೆ ಹೆಣ್ಣು ಬೇಕೆಂದು ಟವರ್ ಏರಿ ಕುಳಿತ ಭೂಪ !
ಸಪ್ತಸಾಗರ ವಾರ್ತೆ ವಿಜಯಪುರ, ಮೇ. 25:ಮದುವೆಗೆ ಹೆಣ್ಣು ಸಿಗದ್ದಕ್ಕೆ ಓರ್ವ ಯುವಕ ಮನ ನೊಂದು ಮೊಬೈಲ್ ಟವರ್ ಏರಿ ಕುಳಿತ ಹೈಡ್ರಾಮಾ ಮಾಡಿದ ಘಟನೆ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಸೋಮವಾರ ನಡೆದಿದೆ.ಕೋಟ್ಯಾಳ ಗ್ರಾಮದ ಯುವಕ ಶ್ರೀಶೈಲ ನಾಗಪ್ಪ ರಾಮತೀರ್ಥ ಟವರ್ ಏರಿ ಕುಳಿತು ಎಲ್ಲರ ಗಮನ ಸೆಳೆದ.ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶ್ರೀಶೈಲನ ಮನವೊಲಿಸಿ ಮೊಬೈಲ್ ಟವರ್ ನಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಯುವಕ ಟವರ್ ಏರಿ ಕುಳಿತಿದ್ದು ಹೊಸದೇನಲ್ಲ. ಈ ಹಿಂದೆ ಮದ್ಯ ಹಾಗೂ ಗುಟಕಾ…


