ಟಿಪ್ಪರ್ ಡಿಕ್ಕಿಗೆ ನುಜ್ಜುಗುಜ್ಜಾದ ಟೋಲ್ ಪ್ಲಾಜಾ; ಸಂಚಾರ ಅಸ್ತವ್ಯಸ್ತ
ಸಪ್ತಸಾಗರ ವಾರ್ತೆ,ವಿಜಯಪುರ, ಅ. 4:ಟಿಪ್ಪರ್ವೊಂದು ಟೋಲ್ ಪ್ಲಾಜಾಗೆ ಡಿಕ್ಕಿ ಹೊಡೆದ ಪರಿಣಾಮ ಶುಲ್ಕ ಸಂಗ್ರಹ ಕೇಂದ್ರ ಸಂಪೂರ್ಣ ನುಜ್ಜುಗುಜ್ಜಾಗಿ, ವಿಜಯಪುರ–ಕಲಬುರಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡ ಘಟನೆ ಸಿಂದಗಿ ತಾಲೂಕಿನ ಕನ್ನೊಳ್ಳಿ ಬಳಿ ಭಾನುವಾರ ನಸುಕಿನ ಜಾವ ನಡೆದಿದೆ.ರಾಷ್ಟ್ರೀಯ ಹೆದ್ದಾರಿ-52ರಲ್ಲಿರುವ ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾಗೆ ಸೇರಿದ ಟೋಲ್ ಪ್ಲಾಜಾಗೆ ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಶುಲ್ಕ ಸಂಗ್ರಹಿಸುವ ಕಟ್ಟಡ ಹಾಗೂ ಟೋಲ್ ವ್ಯವಸ್ಥೆಗೆ ಭಾರಿ ಹಾನಿಯಾಗಿದೆ.ಟೋಲ್ ಪ್ಲಾಜಾದ ಪ್ರಮುಖ ಭಾಗ ಹಾನಿಗೊಳಗಾದ ಪರಿಣಾಮ…


