ಮುಂಬಯಿ ರೈಲ್ವೆಯನ್ನು ಇಂಡಿ ನಿಲ್ದಾಣದಲ್ಲಿ ನಿಲ್ಲಿಸಲು ಜಿಗಜಿಣಗಿ ಪತ್ರ
ಸಪ್ತಸಾಗರ ವಾರ್ತೇ,ವಿಜಯಪುರ, ಮೇ 5:ಗದಗದಿಂದ ಮುಂಬಯಿಗೆ ಸಂಚರಿಸುವ ರೈಲ್ವೆಗೆ ಇಂಡಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಸೌಲಭ್ಯ ಕಲ್ಪಿಸಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಒತ್ತಾಯಿಸಿದ್ದಾರೆ.ನಿಂಬೆ ಬೆಳೆಯ ಜಾಗತಿಕ ಟ್ಯಾಗ್ ಪಡೆದಿರುವ ದೇಶದ ಎಲ್ಲ ಕಡೆ ನಿಂಬೆ ಹಣ್ಣು ಸರಬರಾಜು ಮಾಡುವ ಕರ್ನಾಟಕ ಮಹಾರಾಷ್ಟ್ರದ ಗಡಿ ಭಾಗವಾಗಿರುವ ಇಂಡಿ ಸಾಕಷ್ಟು ವ್ಯಾಪಾರ ವಹಿವಾಟಿನಲ್ಲಿ ಮುಂಚೂಣಿಯಲ್ಲಿದೆ. ಜೊತೆಗೆ ಅತ್ಯುತ್ತಮ ಗುಣಮಟ್ಟದ ದ್ರಾಕ್ಷಿ, ದಾಳಿಂಬೆ ಹಾಗೂ ಇತರೆ ವಾಣಿಜ್ಯ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುತ್ತಿದ್ದು, ಜವಳಿ ವ್ಯಾಪಾರದ ಕೇಂದ್ರವಾಗಿರುವ ಇಂಡಿ…


