ಲಂಚ: ಕೆ. ಬಿ. ಜೆ. ಎನ್. ಎಲ್ ಇಬ್ಬರು ಅಭಿಯಂತರರು ಲೋಕಾಯುಕ್ತ ಬಲೆಗೆ

ಸಪ್ತಸಾಗರ ವಾರ್ತೆ, ವಿಜಯಪುರ, ಜೂ. 6:ಲಂಚ ಪಡೆಯುತ್ತಿದ್ದ ಕೆಬಿಜೆಎನ್ ಎಲ್ ಇಬ್ಬರು ಅಭಿಯಂತರರು ಸಾಲೋಟಗಿ ಕಚೇರಿಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಸೇವಾಲಾಲ್ ಚೌವಾಣ, ಕಿರಿಯ ಅಭಿಯಂತರ ಸಾತಲಿಂಗಪ್ಪ ರೊಡಗಿ ಲೋಕಾಯುಕ್ತ ಬಲೆಗೆ ಬಿದ್ದ ಅಭಿಯಂತರರು.ಕೆಬಿಜೆಎನ್ಎಲ್ ಕೆನಾಲ್ ಕಾಮಗಾರಿ ಪೂರೈಸಿದ 3,71,419 ಮೊತ್ತದ ಬಿಲ್ ಪಾಸ್ ಮಾಡಿ ಮೇಲಾಧಿಕಾರಿ ಕಚೇರಿಗೆ ಕಳುಹಿಸಲು ಅಭಿಯಂತರ ಸೇವಾಲಾಲ್ 10,000 ರೂ. ಹಾಗೂ ಕಿರಿಯ ಅಭಿಯಂತರ ಸಾತಲಿಂಗಪ್ಪ ಅವರು 8,000 ರೂ. ಗಳ ಲಂಚದ ಬೇಡಿಕೆಯನ್ನು ಇಟ್ಟಿದ್ದರು.ನಾನಾಸಾಹೇಬ ರೋಡಗಿ…

Read More