ಪುಸ್ತಕ ವ್ಯಕ್ತಿಯ ವ್ಯಕ್ತಿತ್ವ ರೂಪಿಸುವ ಜ್ಞಾನ ಭಂಡಾರ- ಸಂತೋಷ ಬಂಡೆ
ಸಪ್ತಸಾಗರ ವಾರ್ತೆ,ಇಂಡಿ, ಜೂ. 9: ಮೊಬೈಲ್ ಒಂದು ಸಂವಹನ ಸಾಧನ, ಆದರೆ ಪುಸ್ತಕ ವ್ಯಕ್ತಿಯ ವ್ಯಕ್ತಿತ್ವ ರೂಪಿಸುವ ಜ್ಞಾನ ಭಂಡಾರ.’ಮೊಬೈಲ್ ಬಿಡಿ-ಪುಸ್ತಕ ಹಿಡಿ’ ಇದು ಘೋಷಣೆ ಅಷ್ಟೇ ಅಲ್ಲ. ಬದಲಿಗೆ ಇಂದಿನ ಮಕ್ಕಳನ್ನು ರಕ್ಷಿಸುವ ಜೀವನಾಡಿಯಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಮಂಗಳವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ‘ಮೊಬೈಲ್ ಬಿಡಿ-ಪುಸ್ತಕ ಹಿಡಿ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರತಿಯೊಬ್ಬ ವಿದ್ಯಾರ್ಥಿಯು ಮೊಬೈಲ್ ಜಗತ್ತಿನಿಂದ ಹೊರಬಂದು, ನೈಜ ಜ್ಞಾನದ ಮೂಲವಾದ ಪುಸ್ತಕವನ್ನು ಹಿಡಿದಾಗ ಮಾತ್ರ…


